ದೇಶ

ಭಾರತಕ್ಕೆ ಆಗಮಿಸಿದ ಮೈಕ್ ಪಾಂಪಿಯೋ, ತೆರಿಗೆ ಶೀಥಲ ಸಮರ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆ ಸಾಧ್ಯತೆ!

Srinivasamurthy VN
ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರು ಭಾರತಕ್ಕೆ ಆಗಮಿಸಿದ್ದು, ಭಾರತ ಮತ್ತು ಅಮೆರಿಕ ನಡುವಿನ ತೆರಿಗೆ ಶೀಥಲ ಸಮರ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆ ಸಾಧ್ಯತೆ ಇದೆ.
ಎನ್ ಡಿಎ-2 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಂಪಿಯೋ ಅವರ ಮೊದಲ ಭಾರತ ಪ್ರವಾಸ ಇದಾಗಿದ್ದು, ಅಲ್ಲದೆ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಮುಖ ರಾಜಕೀಯ ನಾಯಕ ಕೂಡ ಪಾಂಪಿಯೊ ಅಗಿದ್ದಾರೆ. ಜೂನ್ 28–29ರಂದು ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ. ಅದಕ್ಕೂ ಮೊದಲು ಜೈಶಂಕರ್‌ ಮತ್ತು ಪಾಂಪಿಯೊ ಮಾತುಕತೆ ನಡೆಯಲಿದೆ. ಪಾಂಪಿಯೊ ಅವರು ಮೋದಿ ಅವರನ್ನೂ ಭೇಟಿಯಾಗಲಿದ್ದಾರೆ. 
ನಿನ್ನೆ ಸಂಜೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾಂಪಿಯೋ ಅವರು ಇಂದು ವಿದೇಶಾಂಗ ಸಚಿವೆ ಎಸ್‌. ಜೈಶಂಕರ್‌ ಅವರನ್ನು ಭೇಟಿಯಾಗಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಉಗ್ರವಾದ, ಎಚ್‌1ಬಿ ವೀಸಾ ಸಮಸ್ಯೆಗಳು, ಇರಾನ್ ನಿಂದ ತೈಲ ಖರೀದಿ ಮೇಲೆ ಅಮೆರಿಕದ ನಿರ್ಬಂಧದಿಂದ ಆಗಿರುವ ಪರಿಣಾಮಗಳು ಸೇರಿದಂತೆ ಹಲವು ವಿಚಾರಗಳು ಇಂದು ಚರ್ಚೆಗೆ ಬರುವ ಸಾಧ್ಯತೆ ಇದೆ.
ಇನ್ನು ಪಾಂಪಿಯೋ ಅವರಿಗೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರು ಇಂದು ವಿಶೇಷ ಭೋಜನಕೂಟ ಕೂಡ ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಪಾಂಪಿಯೋ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
SCROLL FOR NEXT