ದೇಶ

ವಿದ್ಯಾರ್ಥಿಗಳಿಗೆ ಶುಭಸುದ್ದಿ! ಕೇಂದ್ರದಿಂದ 4,465 ಹೆಚ್ಚುವರಿ ವೈದ್ಯಕೀಯ ಸೀಟುಗಳಿಗೆ ಅನುಮೋದನೆ

Raghavendra Adiga
ನವದೆಹಲಿ: ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಶುಭ ಸುದ್ದಿ! ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಿಂದ ವೈದ್ಯಕೀಯ ಕಾಲೇಜುಗಳಲ್ಲಿ  ಹೆಚ್ಚುವರಿ 4,465 ಸೀಟುಗಳಿಗೆ ಅನುಮೋದಿಸಿದೆ.ಈ ಮೂಲಕ ಸರ್ಕಾರಿ ಕೋಟಾದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ ಸುಮಾರು 79,000 ಆಗಲಿದೆ,
ಸರ್ಕಾರದ ಹೊಸ ನೀತಿಯ ಪ್ರಕಾರ, ಶೇಕಡಾ 10 ರಷ್ಟು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ  (ಇಡಬ್ಲ್ಯೂಎಸ್) ವಕಾಶ ಕಲ್ಪಿಸಲು 17 ರಾಜ್ಯಗಳ ಸುಮಾರು 120 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ. 2018 ಕ್ಕೆ ಹೋಲಿಸಿದರೆ, ಈ ವರ್ಷ ಮೇ ಅಂತ್ಯದ ವೇಳೆಗೆ 4,503 ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳ ಹೆಚ್ಚಳವಾಗಿದೆ.ಎಂದು  ಪತ್ರಿಕೆಯು ಹಿಂದೊಮ್ಮೆ ವರದಿ ಮಾಇತ್ತು.ಇದೇ ಮೊದಲ ಬಾರಿಗೆ ವರ್ಷವೊಂದರಲ್ಲೇ ಎಂಬಿಬಿಎಸ್ ಸೀಟುಗಳಲ್ಲಿ ಅತಿ ದೊಡ್ಡ ಪ್ರಮಾಣದ ಹೆಚ್ಚಳ ದಾಖಲಾಗಿದೆ.
ಸಾಮಾನ್ಯ ಕೋಟಾಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಎಷ್ಟು ಸೀಟುಗಳನ್ನು ನೀಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲವಾದರೂ  ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಹೆಚ್ಚಿನ ಸೀಟುಗಳನ್ನು ಕೋರಲು ಕಾಲೇಜುಗಳಿಗೆ ನೀಡಲಾದ ಅವಕಾಶದ ಪರಿಣಾಮವಾಗಿ ಸೀಟುಗಳಲ್ಲಿ ಹೆಚ್ಚಳ ಆಗಿದೆ. ಪರಿಷ್ಕೃತ ಸಂಖ್ಯೆಯ ಸೀಟುಗಳನ್ನು ಜೂನ್ 28 ರೊಳಗೆ ನಿಗದಿಪಡಿಸಲು  ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 "ನಾವು ಸುಮಾರು 500 ಸೀಟುಗಳ ಏರಿಕೆ ನಿರೀಕ್ಷಿಸುತ್ತಿದ್ದೇವೆ, ಏಕೆಂದರೆ 6 ರಾಜ್ಯಗಳು ಕೆಲವೇ ದಿನಗಳಲ್ಲಿ ಪರಿಷ್ಕೃತ ಪಟ್ಟಿಗಳನ್ನು ಕಳುಹಿಸುವ ಸಾಧ್ಯತೆಯಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಡಬ್ಲ್ಯೂಎಸ್ ಕೋಟಾಗೆ ಅನುಕೂಲವಾಗುವಂತೆ ಸೀಟುಗಳ ಹೆಚ್ಚಳವು ಹೆಚ್ಚಿನ ವೈದ್ಯಕೀಯ ಕಾಲೇಜುಗಳಲ್ಲಿ 10-50ರ ವ್ಯಾಪ್ತಿಯಲ್ಲಿದೆ ಮತ್ತು ಅತಿದೊಡ್ಡ ಫಲಾನುಭವಿ  ರಾಜ್ಯ ಮಹಾರಾಷ್ಟ್ರವಾಗಿದ್ದು, ಅಲ್ಲಿ 900 ಕ್ಕಿಂತ ಹೆಚ್ಚು ಸೀಟುಗಳನ್ನು ಕಾದಿರಿಸಲಾಗುತ್ತಿದೆ.
SCROLL FOR NEXT