ದೇಶ

ಭಾರತೀಯ ವಾಯುಪಡೆ ವಿಮಾನಕ್ಕೆ ಹಕ್ಕಿ ಡಿಕ್ಕಿ, ತಪ್ಪಿದ ಭಾರೀ ಅನಾಹುತ

Lingaraj Badiger
ಚಂಡೀಗಢ: ಭಾರತೀಯ ವಾಯುಪಡೆಯ ವಿಮಾನ ಜಾಗ್ವಾರ್‌ಗೆ ಹಕ್ಕಿಯೊಂದು ಡಿಕ್ಕಿಯಾಗಿ ತುರ್ತು ಲ್ಯಾಂಡಿಂಗ್‌ ಮಾಡಿದ ಘಟನೆ ಗುರುವಾರ ನಡೆದಿದೆ. ಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದ್ದು, ವಿಮಾನವೂ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದೆ.
ಹರಿಯಾಣದ ಅಂಬಾಲಾ ವಾಯುನೆಲೆಯಿಂದ ಟೇಕಾಫ್ ಆದ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಹಕ್ಕಿ ಇಂಜಿನ್ ನಲ್ಲಿ ಸಿಲುಕಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ತಕ್ಷಣ ಎಚ್ಚೆತ್ತ ಪೈಲಟ್‌ ವಿಮಾನದ ಹೆಚ್ಚುವರಿ ಇಂಧನ ಟ್ಯಾಂಕ್‌ ಮತ್ತು ತರಬೇತಿಗೆ ಇಡಲಾಗಿದ್ದ ಸಣ್ಣ ಪ್ರಮಾಣದ ಬಾಂಬ್‌ಗಳನ್ನು ಹೊರಗೆ ಎಸೆದಿದ್ದಾರೆ. ಬಳಿಕ ಸುರಕ್ಷಿತವಾಗಿ ವಿಮಾ ಲ್ಯಾಂಡ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೈಲಟ್‌ ಎಸೆದ ಬಾಂಬ್‌ಗಳು ಜನ ವಸತಿ ಪ್ರದೇಶದಲ್ಲಿ ಬಿದ್ದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ವಾಯುಪಡೆ ತಿಳಿಸಿದೆ.
ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಾಗ ಪೈಲಟ್ ತುರ್ತು ಲ್ಯಾಂಡಿಂಗ್‌ ಮಾಡುವ ಮುನ್ನ ವಿಮಾನದಲ್ಲಿದ್ದ ಹೆಚ್ಚುವರಿ ಇಂಧನ ಟ್ಯಾಂಕ್‌, ಬಾಂಬ್‌ಗಳನ್ನು ಹೊರಗೆ ಎಸೆಯಲೇ ಬೇಕಾತ್ತದೆ.
SCROLL FOR NEXT