ತೆಹ್ರ್ವಿನ್' ಭೋಜನ 
ದೇಶ

ಉತ್ತರ ಪ್ರದೇಶ: ಮುಸ್ಲಿಂ ಸಹೋದರರಿಂದ ಹಿಂದೂ ಕೆಲಸಗಾರನ ಅಂತಿಮ ಸಂಸ್ಕಾರ!

ಉತ್ತರ ಪ್ರದೇಶದ ಬಾದಿ ಜಿಲ್ಲೆಯ ಹರಿರಾಮ್ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿರುವುದಲ್ಲದೇ, 13 ದಿನಗಳ ಶೋಕಾಚರಣೆ ಅವಧಿಯಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರೆವೇರಿಸಿದೆ.

ಲಖನೌ: ಉತ್ತರ ಪ್ರದೇಶದ ಬಾದಿ ಜಿಲ್ಲೆಯ ಹರಿರಾಮ್ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿರುವುದಲ್ಲದೇ, 13 ದಿನಗಳ ಶೋಕಾಚರಣೆ ಅವಧಿಯಲ್ಲಿ ಸನಾತನ ಧರ್ಮದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರೆವೇರಿಸಿದೆ.

ಮೃತಪಟ್ಟ 13 ದಿನಕ್ಕೆ ನಡೆಸಲಾಗುವ ತೆಹ್ರ್ವಿನ್' (ತಿಥಿ)  ಕಾರ್ಯಕ್ರಮವನ್ನು ಕೂಡಾ ನಡೆಸಲಾಗಿದೆ. ಮೃತನ ಸಂಬಂಧಿಕರು, ಕುಟುಂಬಸ್ಥರಿಗೆ ಭೋಜನವನ್ನು ಆಯೋಜಿಸಲಾಗಿದೆ.

ಮೊರಾರಿ ಲಾಲ್ ಶ್ರೀವಾಸ್ತವ (65) ಮೃತಪಟ್ಟ ಹಿಂದೂ ವ್ಯಕ್ತಿಯಾಗಿದ್ದಾನೆ. ಈತ ಪೂರ್ವಉತ್ತರ ಪ್ರದೇಶದ ಬಾದಿಯಲ್ಲಿ ಮೊಹಮ್ಮದ್ ಕಾನ್ ಹಾಗೂ ಫರೀದ್ ಕಾನ್ ಎಂಬವರ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿರುವಾಗಲೇ ಜೂನ್ 13 ರಂದು ಶ್ರೀವಾಸ್ತವ್  ಮೃತಪಟ್ಟಿದ್ದಾರೆ . ಆದರೆ, ಆತನ ಕುಟುಂಬಸ್ಥರು ಇಲ್ಲದ ಕಾರಣ ಮೃತದೇಹವನ್ನು ಖಾನ್ ಅವರಿಗೆ ನೀಡಲಾಗಿದೆ. ಕೋಳಿಫಾರಂನಲ್ಲಿನ ಇತರ ಕೆಲಸಗಾರರ ನೆರವಿನೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗಿದೆ.

ಹಿಂದೂ ಸಂಪ್ರದಾಯದಂತೆ ಕಳೆದ ಮಂಗಳವಾರ ತೆಹ್ರ್ವಿನ್' ಕಾರ್ಯಕ್ರಮ ಆಯೋಜಿಸಲಾಗಿತ್ತು, ಖಾನ್ ಕುಟುಂಬ ಹಾಗೂ ಕೋಳಿಫಾರಂನಲ್ಲಿನ ಇತರರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕುವ ಮೂಲಕ ಜನರನ್ನು ತಿಥಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.ಹಿಂದೂ ಹಾಗೂ ಮುಸ್ಲಿಂ ಸಮುದಾಯದ 1 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೋಜನ ಮಾಡಿದ್ದಾರೆ.

ಶ್ರೀವಾಸ್ತವ್ 15 ವರ್ಷಗಳಿಂದಲೂ ಇರ್ಫಾನ್ ಹಾಗೂ ಫರೀಧ್ ಖಾನ್ ಬಳಿ ಕೆಲಸ ಮಾಡುತ್ತಿದ್ದು, ಆತನನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಲಾಗಿತ್ತು ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.

ಕುಟುಂಬದ ಹಿರಿಯ ಸದಸ್ಯರಂತೆ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಇರ್ಫಾನ್ ಖಾನ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT