ದೇಶ

ಅಳ್ವಾರ್ ಹಲ್ಲೆ ಪ್ರಕರಣ: ಗೋಕಳ್ಳಸಾಗಣೆ ಆರೋಪ, ಮೃತ ಪೆಹ್ಲು ಖಾನ್ ಹಾಗೂ ಪುತ್ರರ ವಿರುದ್ದ ಚಾರ್ಜ್‌ಶೀಟ್

Raghavendra Adiga
ಅಳ್ವಾರ್ (ರಾಜಸ್ಥಾನ್): ಎರಡು ವರ್ಷಗಳ ಹಿಂದೆ ರಾಜಸ್ಥಾನದ ಅಳ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ಮತ್ತು ಆತನ ಇಬ್ಬರು ಗಂಡು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪದಡಿ ರಾಜಸ್ಥಾನ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಖಾನ್ ಪುತ್ರರಾದ ಇರ್ಷಾದ್ (25) ಮತ್ತು ಆರಿಫ್ (22) ವಿರುದ್ಧ 5, 8 ಮತ್ತು 9 ನೇ ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್  ಸಲ್ಲಿಕೆಯಾಗಿದ್ದರೆ ರಾಜಸ್ಥಾನ್ ಗೋ ಹತ್ಯೆ ಹಾಗೂ ಸಾಗಾಟ ನಿಷೇಧ ಕಾಯ್ದೆ 1995ರ ಸೆಕ್ಷನ್ 6 ರ ಅಡಿಯಲ್ಲಿ ಮೃತ ವ್ಯಕ್ತಿಯ ವಿರುದ್ಧ ಆರೋಪಗಳನ್ನು ರೂಪಿಸಲಾಗಿದೆ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ 13 ದಿನಗಳ ನಂತರ ಕಳೆದ ವರ್ಷ ಡಿಸೆಂಬರ್ 30 ರಂದು ಖಾನ್ ವಿರುದ್ಧದ ದೋಷಾರೋಪ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು.
ಕಾಯ್ದೆಯಲ್ಲಿನ ನಿಯಮದಂತೆ ಮಾಸ ಹಾಗೂ ಇತರೆ ಉದ್ದೇಶಗಳಿಗಾಗಿ ರಫ್ತು ಮಾಡುವ ಉದ್ದೇಶದಿಂದ ಗೋವಿನ ಪ್ರಾಣಿಗಳ ರಫ್ತು ನಿಷೇಧಕ್ಕೆ ಆರ್‌ಬಿಎ ಕಾಯ್ದೆಯ ಸೆಕ್ಷನ್ 5 ಸಂಬಂಧ ಕಲ್ಪಿಸಿದೆ. ಆದರೆ ಸೆಕ್ಷನ್ 6 ರ ಪ್ರಕಾರ ಸಾಗಣೆದಾರರು ಸಹ ಒಬ್ಬ ಅಪಹರಣಕಾರ ಮತ್ತು ಆತನಿಗೆ ಸಹ ಶಿಕ್ಷೆ ವಿಧಿಸಲು ಅವಕಾಶವಿದೆ.
ರಾಜಸ್ಥಾನದ ಈ ಹಿಂದಿನ ಬಿಜೆಪಿ ಸರ್ಕಾರ ಸಹ ಪೆಹ್ಲೂ ಖಾನ್ ಹಾಗೂ ಇನ್ನಿಬ್ಬರ ಮೇಲೆ ಇದೇ ರೀತಿಯ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. 
SCROLL FOR NEXT