ಚಾಮರಾಜನಗರ: ಬೈಕ್ ನಲ್ಲಿ ಸಂಚರಿಸುತ್ತಾ ಪ್ರಕೃತಿಯ ಸೊಬಗನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಗ ದಿಢೀರ್ ಅಂತಾ ಹುಲಿಯೊಂದು ದಾಳಿಗೆ ಮುಂದಾಗಿದ್ದ ದೃಶ್ಯ ಭೀಕರವಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಧ್ಯದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಕೇರಳ ಗಡಿಯ ಮುತ್ತಂಗ ಎಂಬಲ್ಲಿ ಸವಾರರಿಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ ಪ್ರಕೃತಿಯ ಸೊಬಗನ್ನು ಚಿತ್ರೀಸಿಕೊಳ್ಳುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತ್ತಿದ್ದ ಹುಲಿಯೊಂದು ವೇಗವಾಗಿ ಬಂದು ದಾಳಿಗೆ ಮುಂದಾಗಿದೆ. ಆದರೆ ಬೈಕ್ ಸ್ವಲ್ಪ ವೇಗವಾಗಿದ್ದರಿಂದ ಬೇಟೆಯಾಡಲು ಸಾಧ್ಯವಾಗದೆ ಪಕ್ಕಕ್ಕೆ ಹೋಗಿದೆ.
ಆದರೆ ಬೈಕ್ ನಲ್ಲಿ ಕುಳಿತ್ತಿದ್ದವರು ದಿಢೀರ್ ಅಂತ ಹುಲಿ ತಮ್ಮ ಮೇಲೆ ದಾಳಿಗೆ ಮುಂದಾಗಿದ್ದನ್ನು ಕಂಡು ಜೀವ ಬಾಯಿಗೆ ಬಂದಂತೆ ಬಾಸವಾಗಿದೆ. ಅಂತೂ ದೃಶ್ಯಗಳನ್ನು ನೋಡಿದರೆ ಎಂತಹವರಿಗೂ ಎದೆ ನಡುಗುತ್ತದೆ.