ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಬುಡಕಟ್ಟು ಯುವತಿಯನ್ನು ಮನಬಂದಂತೆ ಚಚ್ಚಿದ್ರು
ಭೋಪಾಲ್: ದಲಿತ ಯುವಕನೊಡನೆ ಪ್ರೇಮ ಸಂಬಂಧವಿರಿಸಿಕೊಂಡಿದ್ದಾಳೆನ್ನುವ ಕಾರಣಕ್ಕೆ ಬುಡಕಟ್ಟು ಸಮುದಾಯದ ಯುವತಿಯನ್ನು ಅವಳ ರಕ್ತಸಂಬಂಧಿ ಮತ್ತು ಸಮುದಾಯದ ಸದಸ್ಯರೇ ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಜೂನ್ 25ರಂದು ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯ ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಇನ್ನು ಈ ಕ್ರೂರ ಘಟನೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ನಂತರವೇ ಹೊರಜಗತ್ತಿಗೆ ಈ ಘಟನೆಯ ಅರಿವಾಗಿದೆ.
ಬಾಗ್ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಯುವತಿಯ ಚಿಕ್ಕಪ್ಪಸೋದರ ಸಂಬಂಧಿಗಳು ಮತ್ತು ಸಮುದಾಯದ ಇತರ ಸದಸ್ಯರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
21 ವರ್ಷದ ಬುಡಕಟ್ಟು ಯುವತಿ ಇತ್ತೀಚೆಗೆ ತಾನು ಪ್ರೀತಿಸಿದ ದಲಿತ ಯುವಕನೊಂದಿಗೆ ಓಡಿಹೋಗಿದ್ದಳೆಂದು ತನಿಖೆಯಿಂದ ತಿಳಿದುಬಂದಿದೆ. ಆದರೆ ಅದಾಗಿ ಕೆಲ ದಿನಗಳಲ್ಲೇ ಪ್ರೇಮಪಕ್ಷಿಗಳನ್ನು ಪತ್ತೆ ಮಾಡಿದ ಪೋಲೀಸರು ಯುವತಿಯನ್ನು ಆಕೆಯ ಮನೆಗೆ ಸೇರಿಸಿದ್ದರು.
ತರುವಾಯ ಆಕೆಗೆ ಭಿಲಾಲ್ ಸಮುದಾಯದ ಯುವಕನನ್ನು ಮದುವೆಯಾಗುವಂತೆ ಅವಳ ಸಂಬಂಧಿಕರು ಒತ್ತಾಯ ಹೇರಲು ಪ್ರಾರಂಭಿಸಿದ್ದಾರೆ. ಆದರೆ ಹುಡುಗಿ ತನ್ನ ಆಯ್ಕೆಯ ಯುವಕರನ್ನು ಮದುವೆಯಾವ್ಗುವುದಾಗಿ ಪಟ್ಟು ಹಿಡಿದಿದ್ದಾಳೆ.ಇದರಿಂದ ರೊಚ್ಚಿಗೆದ್ದ ಆಕೆಯ ಚಿಕ್ಕಪ್ಪ ಹಾಗೂ ಸಂಬಂಧಿಗಳು ಆಕೆಯನ್ನು ಪಿಕ್ ಅಪ್ ವಾಹನದಲ್ಲಿ ಎತ್ತಿಕೊಂಡು ಬಂದು ತೆರೆದ ಜಾಗದಲ್ಲಿ ಹೊರಗೆಳೆದು ಥಳಿಸಿದ್ದಾರೆ. ಈ ವೇಳೆ ಆಕೆಯ ಸಹೋದರರು, ಸೋದರಸಂಬಂಧಿಗಳು ಮತ್ತು ಸಮುದಾಯದ ಇತರ ಸದಸ್ಯರು ನಿಷ್ಕರುಣೆಯಿಂದ ಕೋಲು, ದೊಣ್ಣೆಗಳಿಂದ ಆಕೆಯನ್ನು ಹೊಡೆದಿದ್ದಾರೆ.ಅವಳು ಸಹಾಯಕ್ಕಾಗಿ ಕೂಗುತ್ತಿದ್ದರೂ ಯಾರೊಬ್ಬರೂ ಕರುಣೆ ತೋರಲಿಲ್ಲ.ಅಲ್ಲದೆ ಯುವತಿಯ ಕೂದಲಿಗೆ ಕೈಹಾಕಿ ರಸ್ತೆ ತುಂಬಾ ಎಳೆದಾಡಿದ್ದಾರೆ. ದಾಳಿಕೋರರು ಕೈ ಕಾಲುಗಳಿಂದ ಹಿಡಿದು ದೇಹದಾದ್ಯಂತ ಕೋಲು, ದೊಣ್ಣೆಗಳಿಂದ ಹೊಡೆದರು ಕಾಲುಗಳಿಂದ ಒದ್ದರು.
“ಐಪಿಸಿಯ ಸೆಕ್ಷನ್ 323, 294, 506, 147, 148, 307, 354 ಮತ್ತು 34 ರ ಅಡಿಯಲ್ಲಿ ಪೊಲೀಸರು ಕ್ರೌರ್ಯದಲ್ಲಿ ಭಾಗಿಯಾಗಿದ್ದಾರೆಂದು ಗುರುತಿಸಲ್ಪಟ್ಟ ಏಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹುಡುಗಿಯ ಜೊತೆ. ಅವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ”ಬಾಗ್ ಪೊಲೀಸ್ ಠಾಣೆ ಉಸ್ತುವಾರಿ ಕಮಲೇಶ್ ಸಿಂಗಾರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos