ನವದೆಹಲಿ: ಪಾಕಿಸ್ತಾನದಲ್ಲಿದ್ದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಕಡಿಮೆ ದಿನದಲ್ಲಿಯೇ ತಾಯ್ನಾಡಿಗೆ ವಾಪಾಸ್ ಆಗುತ್ತಿರುವುದು ನಮ್ಮ ರಾಜತಾಂತ್ರಿಕತೆಗೆ ದೊರೆತ ಗೆಲುವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಇಂಡಿಯಾ ಟುಡೆ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಪುಲ್ವಾಮಾ ದಾಳಿ ನಂತರ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡಲಾಗಿದೆ. ಇದು ನಮ್ಮ ರಾಜತಾಂತ್ರಿಕತೆಗೆ ದೊರೆತ ವಿಜಯ ಎಂದರು.
ಮಂಗಳವಾರ ಮುಂಜಾನೆ ಪಾಕಿಸ್ತಾನದ ಗಡಿ ದಾಟಿ ಒಳನುಗಿದ್ದ ಭಾರತೀಯ ವಾಯುಪಡೆ ಬಾಲಕೋಟ್ ನಲ್ಲಿದ್ದ ಜೈಷ್- ಇ- ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ಬಾಂಬ್ ಹಾಕಿ ನಾಶಗೊಳಿಸಿದ್ದವು. ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.
ವಾಘಾ ಗಡಿ ಮೂಲಕ ಅಭಿನಂದನ್ ಭಾರತ ಪ್ರವೇಶಿಸಲಿದ್ದು, ಅವರನ್ನು ಸ್ವಾಗತಿಸಲು ಭಾರತೀಯ ವಾಯುಪಡೆ ಕಾಯುತ್ತಾ ನಿಂತಿದೆ. ಸಂಜೆ 4 ಗಂಟೆ ವೇಳೆಗೆ ಅಭಿನಂದನ್ ಭಾರತಕ್ಕೆ ವಾಪಾಸ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ರಾತ್ರಿ 8 ಆದರೂ ಅಭಿನಂದನ್ ಬಂದಿಲ್ಲ.ಪಾಕಿಸ್ತಾನದ ವಿಳಂಬ ನೀತಿಗೆ ಕಾರಣ ತಿಳಿದುಬಂದಿಲ್ಲ.