ಸಂಗ್ರಹ ಚಿತ್ರ 
ದೇಶ

ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬುದನ್ನು ವಾಯುದಾಳಿ ತೋರಿಸಿದೆ: ನಿವೃತ್ತ ಭಾರತೀಯ ರಾಯಭಾರಿ

ಪಿಒಕೆಯಲ್ಲಿ ವಾಯುದಾಳಿ ಮಾಡುವ ಮೂಲಕ ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದೆ ಎಂದು ನಿವೃತ್ತ ಭಾರತೀಯ ರಾಯಭಾರಿ ಗೌತಮ್ ಬಾಂಬವಾಲೆ ಹೇಳಿದ್ದಾರೆ.

ಇಸ್ಲಾಮಾಬಾದ್: ಪಿಒಕೆಯಲ್ಲಿ ವಾಯುದಾಳಿ ಮಾಡುವ ಮೂಲಕ ಭಾರತ ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದೆ ಎಂದು ನಿವೃತ್ತ ಭಾರತೀಯ ರಾಯಭಾರಿ ಗೌತಮ್ ಬಾಂಬವಾಲೆ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಾಯುದಾಳಿ ಮಾಡುವ ಮೂಲಕ ತಾನು ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ ಎಂದು ನಿವೃತ್ತ ಭಾರತೀಯ ರಾಯಭಾರಿ ಗೌತಮ್ ಬಾಂಬವಾಲೆ ಹೇಳಿದ್ದಾರೆ. ಪಿಒಕೆಯಲ್ಲಿ ಭಾರತೀಯ ವಾಯುಸೇನೆಯ ವಾಯುದಾಳಿ ಕುರಿತು ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತದ ಮುಂದೆ ವಿಫಲ ಅವಕಾಶಗಳಿದ್ದು,ಜೆಇಎಂ ಉಗ್ರ ಸಂಘಟನೆ ಪುಲ್ವಾಮ ಉಗ್ರ ದಾಳಿ ಹೊಣೆಗಾರಿಕೆ ಹೊತ್ತುಕೊಂಡಿದೆ. ಹೀಗಾಗಿ ವಿಶ್ವಸಂಸ್ಥೆಯಲ್ಲಿ ಆ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಬೇಕು ಎಂಬ ಭಾರತದ ಆಗ್ರಹಕ್ಕೆ ಅಮೆರಿಕ, ರಷ್ಟಾ. ಪ್ರಾನ್ಸ್, ಬ್ರಿಟನ್ ದೇಶಗಳಿಂದ ಬೆಂಬಲ ವ್ಯಕ್ತವಾಗಿದೆ.
ಅಂತೆಯೇ ಪಾಕ್ ಪ್ರಾಯೋಜಿತ ಭಯೋತ್ಪಾದನೆ ಎಂಬ ಅಂಶವನ್ನೂ ಭಾರತ ಸಮರ್ಥವಾಗಿ ವಿಶ್ವ ಸಮುದಾಯದ ಮುಂದೆ ಪ್ರತಿಪಾದಿಸಿದ್ದು, ಇದಕ್ಕೆ ಇಂಬು ನೀಡುವಂತೆ ಪಾಕಿಸ್ತಾನ ಭಾರತದ ವಾಯುಗಡಿ ಉಲ್ಲಂಘನೆ ಮಾಡುವ ಮೂಲಕ ಉಗ್ರರ ಕುರಿತು ತನಗಿರುವ ಮೃದು ಧೋರಣೆಯನ್ನು ಜಗಜ್ಜಾಹಿರು ಮಾಡಿದೆ. ಈ ನಿಟ್ಟಿನಲ್ಲಿ ಚೀನಾ ಕೂಡ ಮುಂದಿನ ದಿನಗಳಲ್ಲಿ ಭಾರತವನ್ನು ಬೆಂಬಲಿಸಬಹುದು ಎಂದು ಗೌತಮ್ ಬಾಂಬವಾಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೌತಮ್ ಬಾಂಬವಾಲೆ 2016-2017ರಲ್ಲಿ ಇಸ್ಲಾಮಾಬಾದ್ ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅಧಿಕಾರದ ಸಂದರ್ಭದಲ್ಲೇ ಭಾರತ ಉರಿ ಉಗ್ರದಾಳಿ, ಪಠಾಣ್ ಕೋಟ್ ಉಗ್ರ ದಾಳಿ, ಕುಲಭೂಷಣ್ ಜಾಧವ್ ಪ್ರಕರಣ, ಸರ್ಜಿಕಲ್ ಸ್ಟ್ರೈಕ್ಸ್ ನಂತಹ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿತ್ತು. 
ಬಳಿಕ ಡೊಕ್ಲಾಮ್ ವಿಚಾರವಾಗಿ ಭಾರತ-ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದ್ದಾಗ ಗೌತಮ್ ಬಾಂಬವಾಲೆ ಅವರನ್ನು ಬೀಜಿಂಗ್ ಗೆ ಭಾರತೀಯ ರಾಯಭಾರಿಯಾಗಿ ನಿಯೋಜಿಸಲಾಗಿತ್ತು. ಬೀಜಿಂಗ್ ನಲ್ಲೂ ಗೌತಮ್ ಬಾಂಬವಾಲೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮೂಲಕ ಗಮನ ಸೆಳೆದಿದ್ದರು. ಇವರ ಅಧಿಕಾರಾವಧಿಯಲ್ಲಿ ಭಾರತ ಐತಿಹಾಸಿಕ ವುಹಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿತ್ತು. ಕಳೆದ ವರ್ಷವಷ್ಟೇ ಗೌತಮ್ ಬಾಂಬವಾಲೆ ನಿವೃತ್ತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ