ಸಾಂದರ್ಭಿಕ ಚಿತ್ರ 
ದೇಶ

ಅತ್ಯಾಚಾರ ಮಾಡಿ, ಜೀವಂತ ಸುಡಲು ಹೋಗಿ ತಾನೇ ಆಸ್ಪತ್ರೆ ಪಾಲಾದ ಕಾಮುಕ, ಸಂತ್ರಸ್ಥೆಯ ದಿಟ್ಟತನಕ್ಕೆ ಪೊಲೀಸರೇ ಗಾಬರಿ!

ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಕಾಮುಕನಿಗೆ ಸಂತ್ರಸ್ಥೆ ಮಹಿಳೆ ಸರಿಯಾದ ಬುದ್ಧಿ ಕಲಿಸಿದ್ದು, ಬೆಂಕಿಯೊಂದಿಗೆ ಆತನನ್ನೂ ತಬ್ಬಿ ಹಿಡಿಯುವ ಮೂಲಕ ಆತ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾಳೆ.

ಮಾಲ್ಡಾ: ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಕಾಮುಕನಿಗೆ ಸಂತ್ರಸ್ಥೆ ಮಹಿಳೆ ಸರಿಯಾದ ಬುದ್ಧಿ ಕಲಿಸಿದ್ದು, ಬೆಂಕಿಯೊಂದಿಗೆ ಆತನನ್ನೂ ತಬ್ಬಿ ಹಿಡಿಯುವ ಮೂಲಕ ಆತ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾಳೆ.
ಈ ಘೋರ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದ್ದು, 35 ವರ್ಷದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಸಾಯಿಸಲು ಹೋಗಿ ತಾನೇ ಆಸ್ಪತ್ರೆ ಸೇರಿದ್ದಾನೆ. ಇಲ್ಲಿನ ಸುಭಾಷ್​ ಕಾಲೋನಿಯಲ್ಲಿ ವಾಸವಾಗಿರುವ ಮಹಿಳೆಯ ಮನೆಗೆ ತೆರಳಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಬೆಂಕಿ ಹಚ್ಚಿ ಮನೆಯಲ್ಲೇ ಆಕೆಯನ್ನು ಸಾಯಿಸಲು ನೋಡಿದ್ದ. ಬೆಂಕಿಯ ಬೇಗುದಿಯಲ್ಲಿ ಬೇಯುತ್ತಿದ್ದ ಮಹಿಳೆ ಕೂಡಲೇ  ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನ ಜೊತೆ ಆತನೂ ಸಾಯಬೇಕೆಂದು ನಿರ್ಧರಿಸಿದ್ದಳು.
ಮನೆಯ ಒಳಗಿಂದ ಹೊಗೆ ಕಂಡುಬಂದಿದ್ದರಿಂದ ಸ್ಥಳೀಯರು ಬಾಗಿಲು ಒಡೆದು ನೋಡಿದ್ದಾರೆ. ಆಗ ಅವರಿಬ್ಬರೂ ಬೆಂಕಿಯೊಳಗೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಬೆಂಕಿ ನಂದಿಸಿ ಇಬ್ಬರನ್ನೂ ಮಾಲ್ಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆ ಮಹಿಳೆ ಮಾಲ್ಡಾ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತಿದ್ದು, ಅವರ ಕೈ ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದ ಕಾಮುಕನಿಗೂ ಸುಟ್ಟ ಗಾಯಗಳಾಗಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪೊಲೀಸರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮಹಿಳೆ, ನನ್ನ ಗಂಡ ತೀರಿ ಹೋಗಿ ಸಾಕಷ್ಟು ವರ್ಷವಾಯಿತು. ಮೂರು ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲರೂ ಹೊರಗೆ ಹೋಗಿದ್ದರು. ಆ ವ್ಯಕ್ತಿ ಆಗಾಗ ನಮ್ಮ ಮನೆಗೆ ಬಂದು ಕಾಟ ನೀಡುತ್ತಿದ್ದ. ಸೋಮವಾರ ಯಾರೂ ಇಲ್ಲದಿದ್ದಾಗ ನಮ್ಮ ಮನೆಗೆ ಬಂದ ಆತ ನನ್ನ ಮೇಲೆ ಅತ್ಯಾಚಾರ ನಡೆಸಿ, ರೂಮಿನಲ್ಲೇ ಬೆಂಕಿ ಹಚ್ಚಿದ. ಆಗ ನಾನಂತೂ ಸಾಯೋದು ಖಚಿತ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಆತನಿಗೂ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

SCROLL FOR NEXT