ದೇಶ

ಆಧಾರ್ ಕಾರ್ಡ್ ಸಿಕ್ಕಿದ್ದಕ್ಕೆ ಹೆಮ್ಮೆಯಿದೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಾಸ್ಪೋರ್ಟ್ ಬೇಕಿದೆ: ಅಫ್ಜಲ್ ಗುರು ಪುತ್ರ

Vishwanath S
ನವದೆಹಲಿ: ಸಂಸತ್ ದಾಳಿಕೋರ ಅಫ್ಜಲ್ ಗುರು ಪುತ್ರ ಗಾಲಿಬ್ ನನಗೆ ಆಧಾರ ಕಾರ್ಡ್ ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ನಾನು ಹೆಮ್ಮೆಯ ಭಾರತೀಯನಾಗಿದ್ದೇನೆ. ನನಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಬಯಕೆ ಇದ್ದು ಅದಕ್ಕಾಗಿ ಪಾಸ್ಪೋರ್ಟ್ ಅಗತ್ಯವಿದೆ ಎಂದು ಹೇಳಿದ್ದಾರೆ.
ವಿದೇಶದಲ್ಲಿ ವ್ಯಾಸಂಗ ಮುಂದುವರಿಸಲು ಬಯಸಿರುವ ಗಾಲಿಬ್ ವೈದ್ಯನಾಗುವ ಕನಸು ಕಂಡಿದ್ದು ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾನೆ. ಇತ್ತೀಚಿಗೆ ಆತ ಆಧಾರ್ ಕಾರ್ಡ್ ಪಡೆದುಕೊಂಡಿದ್ದು ಬಹಳ ಸಂತೋಷವಾಗಿದೆ ಎಂದಿದ್ದಾರೆ. ಗಾಲಿಬ್ ತನ್ನ ಅಜ್ಜ ಗುಲಾಂ ಮೊಹಮ್ಮದ್ ಮತ್ತು ತಾಯಿ ತಬಸ್ಸುಮ್ ಜತೆ ವಾಸವಾಗಿದ್ದಾನೆ.
ನನ್ನ ಅಪ್ಪ ಕಂಡಿದ್ದ ಕನಸನ್ನು ನನಸು ಮಾಡಲು ಬಯಸುತ್ತೇನೆ. ಈ ಹಿಂದೆ ಆಗಿರುವ ತಪ್ಪುಗಳಿಂದ ನಾನು ಬಹಳಷ್ಟು ಪಾಠ ಕಲಿತಿದ್ದೇನೆ. ನನ್ನ ಅಪ್ಪ ವೈದ್ಯಕೀಯ ವೃತ್ತಿ ಜೀವನವನ್ನು ಪೂರ್ಣಗೊಳಿಸಲಾಗಲಿಲ್ಲ ಮತ್ತು ನಾನವರ ಕನಸನ್ನು ಪೂರ್ಣಗೊಳಿಸಲು ಬಯಸುತ್ತೇನೆ. ಇನ್ನು ಕೆಲ ಉಗ್ರ ಸಂಘಟನೆಗಳು ನನ್ನ ಮೈಂಡ್ ವಾಶ ಮಾಡಲು ಯತ್ನಿಸಿದ್ದರು. ಆದರೆ ನಾನವರ ಬಲೆಗೆ ಬೀಳಲಿಲ್ಲ ಎಂದು ಗಾಲಿಬ್ ಹೇಳಿದ್ದಾನೆ.
SCROLL FOR NEXT