ಸದ್ಗುರು ಜಗ್ಗಿ ವಾಸುದೇವ್, ರಮ್ಯಾ
ಮಾಜಿ ಸಂಸದೆ, ನಟಿ ರಮ್ಯಾ ಇದೀಗ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಪೇಪರ್ ಕಟಿಂಗ್ ಆಧರಿಸಿ ಹಳೆಯ ಪ್ರಕರಣವೊಂದನ್ನು ಕೆದಕಿ ಟ್ವೀಟ್ ಮಾಡಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ರೋಲ್ ಇತ್ತೀಚೆಗೆ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶ ಭಕ್ತರ ವಿರುದ್ಧ ಮಾತನಾಡುವುದು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮೆಸೇಜ್ ಮಾಡುವುದನ್ನೇ ತಮ್ಮ ಫುಲ್ ಟೈಮ್ ಕೆಲಸ ಮಾಡಿಕೊಂಡಿರುವ ರಮ್ಯಾ ಇದೀಗ ಸದ್ಗುರು ಖ್ಯಾತಿಯ ಜಗ್ಗಿ ವಾಸುದೇವ್ ವಿರುದ್ಧ ಅಪರಾಧ ಪ್ರಕರಣದ ದಾಖಲಾದ ಬಗ್ಗೆ 1997ರ ಅಕ್ಟೋಬರ್ 10ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಆದರೆ ನಂತರ ಕೊಯಮತ್ತೂರು ಪೊಲೀಸರು ಈ ಪ್ರಕರಣವನ್ನು ವಜಾಗೊಳಿಸಿದ್ದರು.
ಆದರೆ ರಮ್ಯಾ ಪ್ರಕರಣದ ಪೇಪರ್ ಕಟಿಂಗ್ ಅನ್ನು ಟ್ವೀಟ್ ಮಾಡಿ ಇವರು ಹೇಗೆ ಬೀದಿಗಳಲ್ಲಿ ನಡೆಯಲು ಸಾಧ್ಯ? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನು ನೋಡಿದ ಅನೇಕರು ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.