ವಾರಂಗಲ್: ಟಿ ಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾವ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿದ್ದಾರೆ, ಕೇಂದ್ರಲ್ಲಿ ಅಧಿಕಾರಕ್ಕೆ ಯಾರು ಬರುತ್ತಾರೆ ಎಂಬುದನ್ನು ಮುಂಬರುವ ಲೋಕಸಭೆ ಚುನಾವಣೆ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.,
ವಾರಾಂಗಲ್ ಮತ್ತು ಭುವನಗಿರಿಯಲ್ಲಿ ನಡೆದ ಲೋಕಸಭೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು. ಟಿಆರ್ಎಸ್ ಗೆ 16 ಸೀಟು ಬಂದರೇ ಕೇಂದ್ರದಲ್ಲಿ ಏನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳು ವೇಗವಾಗಿ ತಮ್ಮ ಜನಪ್ರಿಯತೆ ಕಳೆದುಕೊಳ್ಳುತ್ತಿವೆ,ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ನಿಯಂತ್ರಣ ತೆಗೆದುಕೊಳ್ಳುತ್ತವೆ, ಟಿಆರೆ ಎಸ್ ಗೆ 16 ಸೀಟು ಬಂದರೇ ಕೇಂದ್ರ ಸರ್ಕಾರಕ್ಕೆ ಡಿಕ್ಟೇಟ್ ಮಾಡುತ್ತದೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಹೆಚ್ಚಿನ ಅನುದಾನ ಪಡೆಯುತ್ತದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ 16 ಸೀಟುಗಳನ್ನು ಗೆದ್ದರೇ ಮುಂಬರುವ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಎಂಪಿ ಸೀಟುಗಳನ್ನು ಗೆದ್ದರೇ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು ಎಂಬುದನ್ನು ರಾಜ್ಯದ ಜನತೆಗೆ ತಿಳಿಯಬೇಕು ಎಂದು ಹೇಳಿದ್ದಾರೆ.
ರಾಜ್ದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಿಲ್ಲ, ಹೀಗಾಗಿ ಕಾಂಗ್ರೆಸ್ ಗೆ ಯಾರು ಮತ ಹಾಕಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆ ಎರಡೋ ಅಥವಾ ಮೂರೋ ಸೀಟು ಗೆದ್ದರೇ ಅವರು ಏನು ಮಾಡುತ್ತಾರೆ, ಹೀಗಾಗಿ ಟಿಆರ್ ಎಸ್ ಗೆ ಮತ ನೀಡುವುದೇ ಉತ್ತಮ ಎಂದು ಹೇಳಿದ್ದಾರೆ, ಇಬ್ಬರು ಎಂಪಿ ಗಳಿದ್ದಾಗ 2014 ರಲ್ಲಿ ನಾವು ತೆಲಂಗಾಣ ಪಡೆದವು, ಇನ್ನೂ 16 ಸೀಟು ಗೆದ್ದರೇ ಏನಾಗಬಹುದೆಂದು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದಾರೆ.