ನವದೆಹಲಿ: ಲೋಕಸಭಾ ಚುನಾವಣೆಗೆ ಜೊತೆಗೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೂ ದಿನಾಂಕ ನಿಗದಿಯಾಗಿದೆ.
ತಮಿಳುನಾಡು ಸೇರಿದಂತೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಬಾಕಿ ಉಳಿದಿರುವ ವಿಧಾನಸಭೆ ಉಪ ಚುನಾವಣೆಗಳನ್ನು ನಡೆಸಲಾಗುವುದು ಆದರೆ, ಜಮ್ಮು- ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಮಾತ್ರ ನಡೆಯಲಿದ್ದು, ವಿಧಾನಸಭೆ ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸರ್ಕಾರ ಅಥವಾ ಸಚಿವರು ಯಾವುದೇ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವಂತಿಲ್ಲ .