ದೇಶ

ಮಾನವೀಯತೆಯ ಸಂಕೇತ: ಆಕಸ್ಮಿಕವಾಗಿ ಗಡಿದಾಟಿ ಬಂದ ವೃದ್ಧನನ್ನು ಪಾಕ್ ಅಧಿಕಾರಿಗಳಿಗೆ ಒಪ್ಪಿಸಿದ ಭಾರತೀಯ ಯೋಧರು!

Srinivas Rao BV
ನವದೆಹಲಿ: ಮಾನವಿಯ ನೆಲೆಗಟ್ಟಿನಲ್ಲಿ ಗಡಿ ದಾಟಿ ಬಂದವರನ್ನು ಬಿಡುಗಡೆ ಮಾಡುವುದಕ್ಕೆ ಭಾರತೀಯ ಯೋಧರು ಅತ್ಯುತ್ತಮ ಉದಾಹರಣೆ ನೀಡಿದ್ದಾರೆ. 
ಗಡಿ ಭಾಗದಲ್ಲಿ ಹುಲ್ಲನ್ನು ಕೊಯ್ಯುತ್ತಿದ್ದ 70 ವರ್ಷದ ವೃದ್ಧ ಆಕಸ್ಮಿಕವಾಗಿ ಪಾಕ್ ಗಡಿ ಬಿಟ್ಟು ಭಾರತದ ಗಡಿ ಪ್ರವೇಶಿಸಿದ್ದಾರೆ. 
ಮುಹಮ್ಮದ್ ಅಶ್ರಫ್ ಎಂಬ ವ್ಯಕ್ತಿ ಜಫರ್ವಾಲ್ ತೆಹ್ಸ್ಲಿ ಪ್ರದೇಶದ ಭೋಯಿ ಗ್ರಾಮದ ನಿವಾಸಿಯಾಗಿದ್ದು,  ಎಮ್ಮೆಗಳಿಗಾಗಿ ಹುಲ್ಲು ಕತ್ತರಿಸುತ್ತಿದ್ದರು. ಈ ವೇಳೆ ದಾರಿ ತಪ್ಪಿ ಗಡಿ ದಾಟಿ ಬಂದಿದ್ದು, ಭಾರತೀಯ ಗಡಿ ಭದ್ರತಾ ಸಿಬ್ಬಂದಿಗಳ  ಕೈಗೆ ಸಿಕ್ಕಿದ್ದಾರೆ. 
ಪಾಕ್ ನಿವಾಸಿಯ ಬಗ್ಗೆ ಪಂಜಾಬ್ ರೇಂಜರ್ಸ್ ಮಾಹಿತಿ ನೀಡಿದ್ದು, ಭಾರತೀಯ ಬಿಎಸ್ಎಫ್ ರೈತನನ್ನು ಮಾನವಿಯ ನೆಲೆಗಟ್ಟಿನಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ಜಫರ್ವಾಲ್ ಸೆಕ್ಟರ್ ನಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಿದ್ದಾರೆ.
SCROLL FOR NEXT