ನವದೆಹಲಿ: ಪಾಕ್ ಅಕ್ರಮಿತ ಕಾಶ್ಮೀರದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ಮಾಡಿಗದ ವಿಚಾರ ಇನ್ನೂ ಹಸಿರಾಗಿರುವಾಗಲೇ ಅತ್ತ ಕೇಂದ್ರ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಇಂಡೋ-ಪಾಕ್ ಗಡಿ ಮತ್ತು ಇಂಡೋ-ಚೀನಾ ಗಡಿಗಳಲ್ಲಿ ಸುಮಾರು 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾಗಿದೆ.
ಹೌದು.. ಗಡಿಯಾಚೆಗಿನ ಎಂತಹುದೇ ಆಂತಕದ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆ ಸಚಿವಾಲಯಗಳು ಮಹತ್ವದ ಕ್ರಮಕ್ಕೆ ಮುಂದಾಗಿದ್ದು ಅದರಂತೆ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಭಾರತ ಹಂಚಿಕೊಂಡಿರುವ ಗಡಿಗಳಲ್ಲಿ ಸುಮಾರು 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಮಾರು 5 ಸಾವಿರ ಕೋಟಿ ರೂ ವ್ಯಯಿಸುತ್ತಿದ್ದು. ಗಡಿಯಲ್ಲಿನ ಯಾವುದೇ ಪರಿಸ್ಥಿತಿ ಎದುರಿಸಲು ಈ ಏರ್ ಬೇಸ್ ಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿರುವಂತೆ ಜೆಟ್ ಯುದ್ಧ ವಿಮಾನಗಳನ್ನು ನೋಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಅಲ್ಲದೆ ಭಾರತದ ಜೆಟ್ ಯುದ್ಧ ವಿಮಾನಗಳ ಮೇಲೆ ಶುತ್ರದೇಶಗಳು ನಡೆಸುವ ಕ್ಷಿಪಣಿ ದಾಳಿಗಳಿಂದ ಜೆಟ್ ಯುದ್ಧ ವಿಮಾನಗಳನ್ನು ರಕ್ಷಣೆ ಮಾಡಲೂ ಕೂಡ ಈ ಏರ್ ಬೇಸ್ ಗಳು (ಶೆಲ್ಟರ್ ಗಳು) ನೆರವಾಗಲಿದೆ. ಇದೇ ಕಾರಣಕ್ಕೆ ಸುಮಾರು 5 ಸಾವಿರ ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಈ ಸುಸಜ್ಜಿತ ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಈ ಯೋಜನೆಯಿಂದಾಗಿ ವಾಯುಸೇನೆಯ ಬಳಿ ಇರುವ ಸುಖೋಯ್ 30ಎಂಕೆಐನಂತಹ ಅತ್ಯಂತ ದೊಡ್ಡ ಮತ್ತು ಭಾರಿ ತೂಕದ ಯುದ್ಧ ವಿಮಾನಗಳನ್ನು ರಕ್ಷಿಸಿಕೊಳ್ಳಲು ಈ ಏರ್ ಬೇಸ್ ಗಳು ನೆರವಾಗುತ್ತದೆ.