ರಾಹುಲ್ ಗಾಂಧಿ, ವಿದ್ಯಾರ್ಥಿನಿ 
ದೇಶ

ನನ್ನನ್ನು ರಾಹುಲ್ ಎಂದು ಕರೆಯುವಿರಾ?: ಕಾಲೇಜು ವಿದ್ಯಾರ್ಥಿನಿಗೆ ರಾಹುಲ್ ಗಾಂಧಿ ಕೋರಿಕೆ

ಲೋಕಸಭೆ ಚುನಾವಣೆ ಪ್ರಚಾರಕ್ಕೆ ಈಗಾಗಲೇ ಧುಮುಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೆನ್ನೈಯ ...

ಚೆನ್ನೈ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಈಗಾಗಲೇ ಧುಮುಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೆನ್ನೈಯ ಸ್ಟೆಲ್ಲಾ ಮ್ಯಾರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.
ಸಂವಾದದ ಮಧ್ಯೆ ರಾಹುಲ್ ಗಾಂಧಿ ಬಳಿ ಪ್ರಶ್ನೆ ಕೇಳಲು ಎದ್ದು ನಿಂತ ಅಜ್ರಾ ಎಂಬ ವಿದ್ಯಾರ್ಥಿನಿಯೊಬ್ಬಳು ರಾಹುಲ್ ಸರ್ ಎಂದು ಸಂಬೋಧಿಸಿ ಪ್ರಶ್ನೆ ಕೇಳಲು ಆರಂಭಿಸಿದಳು. ಆಗ ತಕ್ಷಣವೇ ರಾಹುಲ್ ಗಾಂಧಿ ನನ್ನನ್ನು ಸರ್ ಎಂದು ಸಂಬೋಧಿಸುವ ಬದಲು ರಾಹುಲ್ ಎಂದು ಕರೆಯಿರಿ, ಅದು ನನಗೆ ಕೇಳಲು ಹಿತವಾಗಿರುತ್ತದೆ ಎಂದಾಗ ವಿದ್ಯಾರ್ಥಿನಿ ನಾಚಿ ನೀರಾದಳು. ಪ್ರೇಕ್ಷಕರಿಂದ ಕರತಾಡನದೊಂದಿಗೆ ಹೋ ಎಂಬ ಉದ್ಘಾರ ಕೇಳಿಬಂತು.
ಈ ಮೂಲಕ ಯುವ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ರಾಹುಲ್ ಗಾಂಧಿ ಯುವಕರಂತೆ ಹತ್ತಿರವಾಗಲು ಪ್ರಯತ್ನಿಸಿದರು. ರಾಜಕಾರಣಿಯಂತೆ ದಿನನಿತ್ಯದ ಬಿಳಿ ಕುರ್ತಾ ಪೈಜಾಮಾದಲ್ಲಿ ಬರದೆ ಕಾಲೇಜು ಸಂವಾದ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬೂದು ಬಣ್ಣದ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿ ಬಂದಿದ್ದರು.
ನಂತರ ವಿದ್ಯಾರ್ಥಿನಿ ಅಜ್ರಾ ತುಂಬಾ ನಾಚಿಕೆಯಿಂದಲೇ ರಾಹುಲ್ ಎಂದು ಸಂಬೋಧಿಸಿ ತನ್ನ ಪ್ರಶ್ನೆಯನ್ನು ಕೇಳಿದಳು. ಆಗ ಮತ್ತೆ ಸಭಿಕರಿಂದ ಹೋ ಎಂಬ ಉದ್ಘಾರ ಬಂದಿತು. ಅಷ್ಟಕ್ಕೂ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಏನಾಗಿತ್ತೆಂದರೆ, ನಾನು ಫೈನ್ ಆರ್ಟ್ಸ್ ವಿದ್ಯಾರ್ಥಿನಿಯಾಗಿದ್ದು ಮೂಲಭೂತ ಸಂಶೋಧನೆಗಳ ಟಾಟಾ ಇನ್ಸ್ಟಿಟ್ಯೂಟ್ ಗೆ ಭಾರೀ ಹಣದ ಕೊರತೆ ಎದುರಾಗಿದ್ದು ಅದಕ್ಕೆ ಏನು ಮಾಡಬಹುದು ಎಂದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಗಿಲು ಅಕ್ರಮ ಮನೆಗಳ ತೆರವು ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ

ಇಂದೋರ್ ನೀರು ಮಾಲಿನ್ಯ: ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ, ಮೇಯರ್, ಸ್ಥಳೀಯರಿಂದ ಗೊಂದಲಕಾರಿ ಹೇಳಿಕೆ!

ಬಿಡಿಎ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ: ಡಿಕೆ ಶಿವಕುಮಾರ್

ಶಾಂತಿ ಮಾತುಕತೆಗಳ ಮಧ್ಯೆ ಉದ್ವಿಗ್ನತೆ: ಉಕ್ರೇನ್ ದಾಳಿ, ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ 24 ಮಂದಿ ಸಾವು- ರಷ್ಯಾ

2026 ರಲ್ಲಿ "ರಾಜಕೀಯ ಬಡ್ತಿ": ಗೃಹ ಸಚಿವ ಪರಮೇಶ್ವರ ಹೇಳಿಕೆ ಹಿಂದಿನ ಮರ್ಮ ಏನು? Video

SCROLL FOR NEXT