ದೇಶ

ನೀವು ಅಷ್ಟು ಉದಾರಿ ಮತ್ತು ಮುತ್ಸದ್ಧಿಯಾಗಿದ್ದರೆ ಮಸೂದ್ ಅಜರ್ ನನ್ನು ಭಾರತಕ್ಕೆ ಒಪ್ಪಿಸಿ: ಪಾಕ್ ಗೆ ಸುಷ್ಮಾ ಸ್ವರಾಜ್ ಸವಾಲು

Sumana Upadhyaya
ನವದೆಹಲಿ: ತನ್ನ ನೆಲದಲ್ಲಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಾಕಿಸ್ತಾನದ ಜೊತೆಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಭಯೋತ್ಪಾದನೆ ಮುಕ್ತ ವಾತಾವರಣದಲ್ಲಿ ನಾವು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಹಿಂಸಾಚಾರ ಮತ್ತು ಶಾಂತಿ ಮಾತುಕತೆ ಒಟ್ಟೊಟ್ಟಿಗೆ ಸಾಗುವುದಿಲ್ಲ ಎಂದು ಹೇಳಿದರು.
ಬಾಲಕೋಟ್ ನಲ್ಲಿ ಭಾರತೀಯ ವಾಯುದಾಳಿಗೆ ಪಾಕಿಸ್ತಾನದ ಪ್ರತ್ಯುತ್ತರದ ಬಗ್ಗೆ ಪ್ರಶ್ನಿಸಿದಾಗ ಸುಷ್ಮಾ ಸ್ವರಾಜ್, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನೇ ಗುರಿಯಾಗಿಟ್ಟುಕೊಂಡು ಭಾರತ ವಾಯುದಾಳಿ ಮಾಡಿದೆ. ಆದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮಿಲಿಟರಿ ಜೈಶ್ ಎ ಮೊಹಮ್ಮದ್ ಪರವಾಗಿ ನಮ್ಮ ಮೇಲೇಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು.
SCROLL FOR NEXT