ದೇಶ

ಸೇನಾ ಪ್ರಶಸ್ತಿ ಘೋಷಣೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಮ ವಿಶಿಷ್ಠ ಸೇವಾ ಪದಕ!

Srinivasamurthy VN
ನವದೆಹಲಿ: 2018-19ನೇ ಸಾಲಿನ ಸೇನಾ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಲಾಗಿದೆ.
ದೇಶದ ಸೈನಿಕರಿಗೆ ನೀಡುವ ಅತ್ಯುನ್ನತ ಗೌರವಕ್ಕೆ ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾತ್ರರಾಗಿದ್ದು, ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಲಾಗಿದೆ. ಅಂತೆಯೇ ಇತ್ತೀಚೆಗೆ ಕಣಿವೆ ರಾಜ್ಯ ಕಾಶ್ಮೀರದ ಕುಪ್ವಾರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರ ಹೆಡೆ ಮುರಿಕಟ್ಟಿದ 20 ಜಾಟ್ ರೆಜಿಮೆಂಟ್ ನ ಮೇಜರ್ ತುಷಾರ್ ಗೌಬಾ ಅವರಿಗೆ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ.
ಉಳಿದಂತೆ ಸೆಪೋಯ್ ವ್ರಹ್ಮ ಪಾಲ್ ಸಿಂಗ್, ಸಿಆರ್ ಪಿಎಫ್ ಜವಾನ್ ರಾಜೇಂದ್ರ ಸಿಂಗ್ ನಾಯ್ನ್, ರವೀಂದ್ರ ಬಬ್ಬನ್ ಧನವಾಡೆ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ.
ಇದಲ್ಲದೆ 12 ಅಧಿಕಾರಿಗಳು ಮತ್ತು ಸೇನೆ ಜವಾನರು, ಮತ್ತು ಸಿಆರ್ ಪಿಎಫ್ ಹಲವು ಸೈನಿಕರು ಶೌರ್ಯ ಚಕ್ರ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲ ಸೈನಿಕರಿಗೆ ಪದಕ ನೀಡಿ ಗೌರವಿಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೈನಿಕರಿಗೆ ಪದಕ ಪ್ರದಾನ ಮಾಡಲಿದ್ದಾರೆ.
SCROLL FOR NEXT