ದೇಶ

ರಾಫೆಲ್ ರಹಸ್ಯ ದಾಖಲೆ ಪುಟಗಳ ಬಹಿರಂಗ ಬೇಡ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಒತ್ತಾಯ

Raghavendra Adiga
ನವದೆಹಲಿ: ರಾಫೆಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕೇಂದ್ರದ ಅನುಮತಿ ಇಲ್ಲದೆ ಬಹಿರಂಗಪಡಿಸಬಾರದು. ಇದಾಗಲೇ ಕೋರ್ಟ್ ಗೆ ನಿಡಿರುವ ದಾಖಲೆ ಪತ್ರಗಳ  ಸಹ ಭದ್ರತಾ ಕಾರಣದಿಂದ ನ್ಯಾಯಾಲಯ ತೆಗೆದು ಹಾಕಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, ಕೇಂದ್ರದ ಪರ ಸುಪ್ರೀಂ ಕೋರ್ಟ್ ನಲ್ಲಿ ಹಾಜರಾಗಿದ್ದು ಸಾಕ್ಷಿಗಳ ಕಾಯ್ದೆ  (ಎವಿಡೆನ್ಸ್ ಆಕ್ಟ್) ಯಲ್ಲಿರುವ ಸೆಕ್ಷನ್ 123 ವಿಭಾಗ ಹಾಗೂ ಆರ್ ಟಿಐ ಕಾಯ್ದೆಯಲ್ಲಿರುವ ವಿಭಾಗಗಳನ್ನು ಹೆಸರಿಸಿ ವೇಣುಗೋಪಾಲ್ ಈ ವಾದ ಮಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ನೇತೃತ್ವದ ಪೀಠ ಈ ವಿಚಾರಣೆ ನಡೆಸಿದ್ದು ಕೇಂದ್ರದ ವಾದದ ಕುರಿತ ತನ್ನ ತೀರ್ಮಾನವನ್ನು ಕಾಯ್ದಿರಿಸಿದೆ.
SCROLL FOR NEXT