ದೇಶ

ಭಾಷೆಯ ವ್ಯಾಕರಣದಲ್ಲಿ ದೋಷವಿರಬಹುದು ಭಾವನೆಯಲ್ಲಿ ಅಲ್ಲ: ಮತ್ತೆ ಎಲ್ಲರ ಮನಗೆಲ್ಲುತ್ತಿದೆ ಸುಷ್ಮಾ ಸ್ವರಾಜ್ ಟ್ವೀಟ್!

Srinivas Rao BV
ನವದೆಹಲಿ: ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅನಿವಾಸಿ ಭಾರತೀಯರು, ವಿದೇಶಿಗಳಲ್ಲಿರುವ ಭಾರತೀಯರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಟ್ವಿಟರ್ ನಲ್ಲೇ ಅದೆಷ್ಟೋ ಜನರಿಗೆ ಸ್ಪಂದಿಸಿರುವ ಅನೇಕ ಉದಾಹರಣೆಗಳಿವೆ. ಈಗ ಎಂದಿನಂತೆಯೇ ನೆರವಿನ ಹಸ್ತ ಚಾಚಿರುವ ಸುಷ್ಮಾ ಸ್ವರಾಜ್ ನಡೆ ಶ್ಲಾಘನೆಗೆ ಅರ್ಹವಾಗಿದೆ. 
ಟ್ವಿಟರ್ ನಲ್ಲಿ ಗೇವಿ ಎಂಬ ವ್ಯಕ್ತಿ ವಿದೇಶದಲ್ಲಿರುವ ತನ್ನ ಅಸ್ವಸ್ಥ ಸ್ನೇಹಿತನನ್ನು ಭಾರತಕ್ಕೆ ಕಳಿಸಲು ಸಹಾಯ ಕೇಳಿ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದರು. ಆದರೆ ಆತ ತಪ್ಪಾಗಿ ಇಂಗ್ಲೀಷ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಆತನನ್ನು ಟ್ರೋಲ್ ಮಾಡಲಾಗುತ್ತಿತ್ತು. 
ಹಲವು ವ್ಯಾಕರಣ ದೋಷಗಳಿದ್ದರೂ ಸುಷ್ಮಾ ಸ್ವರಾಜ್ ಆತನ ನೆರವಿಗೆ ಧಾವಿಸಿ ಅಗತ್ಯ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. 
ಪಂಜಾಬ್ ನ ನಿವಾಸಿಯಾಗಿರುವ ಗೇವಿ ಎಂಬ ವ್ಯಕ್ತಿ ಮಲೇಷ್ಯಾದಲ್ಲಿರುವ ತನ್ನ ಅಸ್ವಸ್ಥ ಸ್ನೇಹಿತನನ್ನು ಭಾರತಕ್ಕೆ ಕರೆತರಲು ರಾಜತಾಂತ್ರಿಕ ಅಡ್ಡಿ ಉಂಟಾಗಿದೆ ದಯವಿಟ್ಟು ಸಹಕರಿಸಿ ಎಂದು ಸುಷ್ಮಾಸ್ವರಾಜ್ ಅವರಿಗೆ ಟ್ವಿಟರ್ ನಲ್ಲಿ ತಪ್ಪಾದ ಇಂಗ್ಲೀಷ್ ನಲ್ಲಿ ಮನವಿ ಮಾಡಿದ್ದ. ಆ ಟ್ವೀಟ್ ಗೆ ಸ್ಪಂದಿಸಿ, ಸಹಾಯ ಕೇಳಿದವನ ಭಾಷೆಯನ್ನು ಟ್ರೋಲ್ ಮಾಡಿದ್ದನ್ನು ಗಮನಿಸಿರುವ ಸುಷ್ಮಾ ಸ್ವರಾಜ್, ಸಮಸ್ಯೆ ಇಲ್ಲ. ವಿದೇಶಾಂಗ ಸಚಿವೆಯಾದ ನಂತರ ನಾನು ಜನರು ಮಾತನಾಡುವ ಎಲ್ಲಾ ಶೈಲಿಯ ಇಂಗ್ಲೀಷ್ ಉಚ್ಛಾರಣೆ ಹಾಗೂ ವ್ಯಾಕರಣವನ್ನು ಅರಿಯಲು ಕಲಿತಿದ್ದೇನೆ ಎಂದು ಹೇಳಿದ್ದಾರೆ. 
ಆ ವರೆಗೂ ಬಹಳಷ್ಟು ಜನರು ಟ್ವೀಟ್ ಮಾಡಿದ್ದ ವ್ಯಕ್ತಿಯನ್ನು ಟ್ರೋಲ್ ಮಾಡುತ್ತಿದ್ದರು. ಆದರೆ ಸುಷ್ಮಾ ಸ್ವರಾಜ್ ಅವರು ಪ್ರತಿಕ್ರಿಯೆ ನೀಡಿದ ಬಳಿಕ ಅವರ ಟ್ವೀಟ್ ನ್ನು ಹೊಗಳಿ, ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನೀವು ಭಾರತ ಕಂಡ ಅತ್ಯದ್ಭುತ ವಿದೇಶಾಂಗ ಸಚಿವರು ಎಂದು ಬಣ್ಣಿಸುತ್ತಿದ್ದಾರೆ. 
SCROLL FOR NEXT