ದೇಶ

2019 ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳ 4 ನೇ ಪಟ್ಟಿ ಬಿಡುಗಡೆ, ಕೆವಿ ಥಾಮಸ್ ಗೆ ಕೈ ತಪ್ಪಿದ ಟಿಕೆಟ್!

Srinivas Rao BV
ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ 4 ನೇ ಪಟ್ಟಿ ಬಿಡುಗಡೆ ಮಾಡಿದ್ದು,  ಎರ್ನಾಕುಲಂ ನಿಂದ ಹಾಲಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆವಿ ಥಾಮಸ್ ಗೆ ಟಿಕೆಟ್ ನ್ನು ನಿರಾಕರಿಸಲಾಗಿದೆ. 
ಶಶಿ ತರೂರ್ ಸೇರಿದಂತೆ ಒಟ್ಟು 27 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. 
ಎರ್ನಾಕುಲಂ ನಿಂದ ಕೆವಿ ಥಾಮಸ್ ಬದಲಿಗೆ ಅದೇ ಕ್ಷೇತ್ರದ ಶಾಸಕ ಹಿಬಿ ಎಡೇನ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇನ್ನು ಅರುಣಾಚಲ ಪ್ರದೇಶದ ಮಾಜಿ ಸಿಎಂ ನಬಮ್ ತುಕಿ ಅವರನ್ನು ವೆಸ್ಟ್ ಅರುಣಾಚಲ ಪ್ರದೇಶದ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
SCROLL FOR NEXT