ದೇಶ

40 ಸ್ನೇಹಿತರಿಗೆ ರುಚಿಕರವಾದ ಅಡಿಗೆ ಮಾಡುವ ಮೂಲಕ ಐಐಟಿ ಮೆಸ್ ಮುಷ್ಕರಕ್ಕೆ ಅಂತ್ಯ ಹಾಡಿದ್ದರು ಪರಿಕ್ಕರ್

Lingaraj Badiger
ನವದೆಹಲಿ: ಭಾನುವಾರ ನಿಧನದರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಾಲೇಜ್ ದಿನಗಳಲ್ಲಿ ಐಐಟಿ-ಬಾಂಬೆಯ 40 ಸ್ನೇಹಿತರಿಗೆ ರುಚಿಕರವಾದ ಅಡಿಗೆ ಮಾಡುವ ಮೂಲಕ ಮೆಸ್ ಕಾರ್ಮಿಕರ ಮುಷ್ಕರಕ್ಕೆ ಅಂತ್ಯಹಾಡಿದ್ದರು ಎಂದು ಅವರ ಆಪ್ತ ಸ್ನೇಹಿತರೊಬ್ಬರು ಪರಿಕ್ಕರ್ ಅವರ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡಿದ್ದಾರೆ.
ಐಐಟಿಯಲ್ಲಿ ಮೆಸ್ ಕಾರ್ಮಿಕರು ದಿಢೀರ್ ಮುಷ್ಕರಕ್ಕೆ ಕರೆ ನೀಡಿದ್ದರು. ಈ ವೇಳೆ ಮೆಸ್ ಕಾರ್ಯದರ್ಶಿಯಾಗಿದ್ದ ಪರಿಕ್ಕರ್ ಅವರು ಹಾಸ್ಟೆರ್ ನ ಎಲ್ಲಾ ಸ್ನೇಹಿತರಿಗೆ ಅಡಿಗೆಮಾಡಿ ಬಡಿಸಿದ್ದರು ಎಂದು ಅವರ ಸ್ನೇಹಿತ ಮುಕುಂದ್ ದೇಶಪಾಂಡೆ ಹೇಳಿದ್ದಾರೆ.
ನಾವು ಎಲ್ಲರೂ ಸಭೆ ಸೇರಿ ಮುಷ್ಕರ ಹಿಂಪಡೆಯುವಂತೆ ಕಾರ್ಮಿಕರಿಗೆ ಮನವಿ ಮಾಡಿದೆವು. ಆದರೆ ಅವರು ನಿರಾಕರಿಸಿದರು. ಹೀಗಾಗಿ ಪರಿಕ್ಕರ್ ನೇತೃತ್ವದಲ್ಲೇ ನಾವೇ ಅಡಿಗೆ ಮಾಡಿದೆವು ಮತ್ತು ಅದು ಅತ್ಯಂತ ರುಚಿಕರವಾಗಿತ್ತು ಎಂದಿದ್ದಾರೆ.
ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಅವರು 1973ರಿಂದ 1980ರ ವರೆಗೆ ಐಐಟಿ ಬಾಂಬೆ ವಿದ್ಯಾರ್ಥಿಯಾಗಿದ್ದರು. ಪರಿಕ್ಕರ್ ಅವರು ಒಬ್ಬ ಹುಟ್ಟು ನಾಯಕ ಮತ್ತು ವಿನಮ್ರ ವ್ಯಕ್ತಿಯಾಗಿದ್ದರು ಎಂದು ಅವರ ಕಾಲೇಜ್ ಸ್ನೇಹಿತರು ಹೇಳುತ್ತಾರೆ.
SCROLL FOR NEXT