ದೇಶ

ಪ್ರಮೋದ್ ಸಾವಂತ್: ಆಯುರ್ವೇದ ವೈದ್ಯ ಈಗ ಗೋವಾ ಸಿಎಂ

Srinivasamurthy VN
ಪಣಜಿ: ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರ ನಿಧನದ ಬೆನ್ನಲ್ಲೇ ಗೋವಾದ ನೂತನ ಸಿಎಂ ಆಗಿ ಆಯ್ಕೆಯಾಗುವ ಮೂಲಕ ಪ್ರಮೋದ್ ಸಾವಂತ್ ಗೋವಾ ರಾಜಕೀಯ ಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ.
ಇಷ್ಟಕ್ಕೂ ಯಾರು ಈ ಪ್ರಮೋದ್ ಸಾವಂತ್ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪ್ರಮೋದ್ ಸಾವಂತ್ ಅವರು ಹುಟ್ಟಿದ್ದು ಏಪ್ರಿಲ್​ 24, 1973ರಲ್ಲಿ. ಮೂಲತಃ ಆಯುರ್ವೇದಿಕ್​ ವೈದ್ಯರಾಗಿದ್ದ ಪ್ರಮೋದ್ ಸಾವಂತ್ ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡುತ್ತಿದ್ದರು. ವೃತ್ತಿಯಲ್ಲಿ ರಾಸಾಯನಿಕ ಶಾಸ್ತ್ರ ಶಿಕ್ಷಕಿಯಾಗಿರುವ ಅವರ ಪತ್ನಿ ಸುಲಕ್ಷಣ ಅವರು ಸದ್ಯ ಬಿಜೆಪಿ ಮಹಿಳಾ ಮೋರ್ಚದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  
2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆದಿದ್ದ ಪ್ರಮೋದ್ ಸಾವಂತ್ ಮೊದಲ ಯತ್ನದಲ್ಲೇ ಸಂಕ್ವಿಲಿನ್​ ಕ್ಷೇತ್ರದಿಂದ ಆಯ್ಕೆಯಾದರು. ಎಲ್ಲ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಾವಂತ್​ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿತ್ತು.  ಇದೀಗ ಮನೋಹರ್ ಪರಿಕ್ಕರ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸಿಎಂ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
SCROLL FOR NEXT