ಪ್ರಶಾಂತ್ ಕಿಶೋರ್ ಮತ್ತು ಚಂದ್ರಬಾಬು ನಾಯ್ಡು
ನವದೆಹಲಿ: ಬಿಹಾರದ ಡಕಾಯಿತ ಪ್ರಶಾಂತ್ ಕಿಶೋರ್ ಆಂಧ್ರ ಪ್ರದೇಶದಲ್ಲಿ ಲಕ್ಷಾಂತರ ಮತದಾರರನ್ನು ತೆಗೆದು ಹಾಕಿಸಿದ್ದಾನೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ನಾಯ್ಡು ಆರೋಪಕ್ಕೆ ಪ್ರಶಾಂತ್ ಕಿಶೋರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಒಂದು ಸೋಲು ಒಬ್ಬ ರಾಜಕಾರಣಿಯನ್ನು ತುಂಬಾ ಸಮಯದ ಕಾಲ ಆವರಿಸಿರುತ್ತದೆ, ಹೀಗಾಗಿ ಅಂಥವರು ತಮ್ಮ ಮಾತುಗಳಲ್ಲಿ ಹೀನಾಯ ಪದಗಳನ್ನು ಬಳಸುತ್ತಾರೆ, ಇದರಲ್ಲಿ ನನಗೆ ಯಾವುದೇ ಆಶ್ಚರ್ಯ ಕಾಣಿಸುತ್ತಿಲ್ಲ, ನಿಮ್ಮ ಮಾತುಗಳು ಬಿಹಾರದ ಮೇಲೆ ನೀವು ಯಾವ ರೀತಿಯ ಪೂರ್ವಾಗ್ರಹ ಹೊಂದಿದ್ದೀರಾ ಎಂಬುದನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಚಂದ್ರಬಾಬು ನಾಯ್ಡು, ಕೆಸಿಆರ್ ಕ್ರಿಮಿನಲ್ ರಾಜಕಾರಣ ಮಾಡುತ್ತಿದ್ದಾರೆ, ಕಾಂಗ್ರೆಸ್ ಮತ್ತು ಟಿಡಿಪಿ ಶಾಸಕರನ್ನು ಸೆಳೆದುಕೊಳ್ಳುತ್ತಿದ್ದಾರೆ, ಮತ್ತೊಬ್ಬ ಬಿಹಾರ ಡಕಾಯಿತ ಪ್ರಶಾಂತ್ ಕಿಶೋರ್ ಲಕ್ಷಾಂತರ ಮತಗಳನ್ನು ನಾಪತ್ತೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು.