ಸಂಗ್ರಹ ಚಿತ್ರ 
ದೇಶ

ಅಸ್ಸಾಂ: ಟಿವಿ ವಾಹಿನಿಯ ಪತ್ರಕರ್ತನ ಮೇಲೆ ಚೂರಿ ಇರಿತ, ನಾಲ್ವರ ಬಂಧನ

ಅಸ್ಸಾಂ ನ ಗುವಾಹಟಿ ಗಣೇಶ ಗುಡಿ ಪ್ರದೇಶದಲ್ಲಿ ಟಿವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಚೂರಿ ಇರಿದು ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ಗುವಾಹಟಿ: ಅಸ್ಸಾಂ ನ ಗುವಾಹಟಿ ಗಣೇಶ ಗುಡಿ ಪ್ರದೇಶದಲ್ಲಿ ಟಿವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಚೂರಿ ಇರಿದು ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ನ್ಯೂಸ್‌ 18 ಸುದ್ದಿ ವಾಹಿನಿಯ ಪತ್ರಕರ್ತ ಚಕ್ರಪಾಣಿ ಪರಾಶರ ಅವರ ಮೇಲೆ ಹೋಟೆಲ್ ನಲ್ಲಿ ,ಆರಣಾಂತಿಕ ಹಲ್ಲೆ ನಡೆದಿದೆ. ಅವರು ಗುರುವಾರ ಕರ್ತವ್ಯದಲ್ಲಿದ್ದ ವೇಳೆಯಲ್ಲಿ ಹೋಟೆಲ್ ನ ಕೆಲ ಕಾರ್ಮಿಕರು ಚೂರಿಯಿಂಡ ಅವರ ಮೇಲೆ ಹಲ್ಲೆ ನ್ಮಾಡಿದ್ದಾರೆ.
ಘಟನೆ ಸಂಬಂಧ ಪೋಲೀಸರು ನಾಲ್ವರನ್ನು ವ್ಬಂಧಿಸಿದ್ದಾರೆ. ಟಿವಿ ಪತ್ರಕರ್ತ ಚಕ್ರಪಾಣಿ ಗಂಬೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ನ್ಯೂಸ್‌ 18 ಸುದ್ದಿ ಸಂಸ್ಥೆ ಹೇಳಿದೆ.
ವಿವಿಧ ರಾಜಕೀಯ ಪಕ್ಷಗಳು - ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಕರ್ತರ ಸಂಘಟನೆಗಳು ಟಿವಿ ವಾಹಿನಿ ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತದ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!