ಸುಷ್ಮಾ ಸ್ವರಾಜ್ 
ದೇಶ

ಅಪಹೃತ ಹಿಂದೂ ಬಾಲಕಿಯರಿಬ್ಬರ ಬಿಡುಗಡೆಗೆ ಸಚಿವೆ ಸುಷ್ಮಾ ಸ್ವರಾಜ್ ಆಗ್ರಹ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಅಪಹೃತವಾಗಿರುವ ಹಿಂದೂ ಬಾಲಕಿಯರಿಬ್ಬರು ಮರಳಿ ಪೋಷಕರನ್ನು ಸೇರಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ...

ನವದೆಹಲಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಅಪಹೃತವಾಗಿರುವ ಹಿಂದೂ ಬಾಲಕಿಯರಿಬ್ಬರು ಮರಳಿ ಪೋಷಕರನ್ನು ಸೇರಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ಚರಾಜ್ ಒತ್ತಾಯಿಸಿದ್ದಾರೆ. 
ಅಪಹರಣಕ್ಕೊಳಗಾಗಿರುವ ಬಾಲಕಿಯರ ವಯಸ್ಸು 15 ಮತ್ತು 13. ಇದರಲ್ಲಿ ಯಾವುದೇ ವಿವಾದವಿಲ್ಲ, ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರನ್ನು ಬಲವಂತದ ಮತಾಂತರಕ್ಕೆ ಒಳಪಡಿಸಲಾಗಿದೆ. ಇಬ್ಬರನ್ನೂ ಅವರ ಕುಟುಂಬಕ್ಕೆ ಮರಳಿಸುವ ಮೂಲಕ ನ್ಯಾಯ ಸಿಗುವಂತಾಗಬೇಕು ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. 
“ಅಪ್ರಾಪ್ತ ಬಾಲಕಿಯರು ಮತಾಂತರದ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ತಲುಪಿರುವುದಿಲ್ಲ ಎಂಬುದನ್ನು ನವ ಪಾಕಿಸ್ತಾನದ ಪ್ರಧಾನಿ ನಂಬುವುದಿಲ್ಲ ಎನಿಸುತ್ತಿದೆ” ಪಾಕ್ ಪ್ರಧಾನಿಯವರನ್ನು ಸುಷ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ
ಹೋಳಿ ಹಬ್ಬದ ಹಿಂದಿನ ದಿನ ಸಿಂದ್ ಪ್ರಾಂತದ ಬಾಲಕಿಯರನ್ನು ಅಪಹರಿಸಿ, ಮತಾಂತರಗೊಳಿಸಿದ ನಂತರ ಮುಸ್ಲಿಂ ಯುವಕರೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯರನ್ನು ಮರಳಿಸುವಂತೆ ಆಗ್ರಹಿಸಿ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT