ಸುಬ್ರಹ್ಮಣಿಯನ್ ಸ್ವಾಮಿ ಸಲಹೆ ಕೇಳಿದ ರಾಮ ಮಂದಿರ ಮಧ್ಯಸ್ಥಿಕೆ ಸಮಿತಿ!
ನವದೆಹಲಿ: ರಾಮ ಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ರೀತಿಯಲ್ಲಿ ಸಲಹೆಗಳನ್ನು ನೀಡುವುದರಲ್ಲಿ ಖ್ಯಾತಿ ಪಡೆದಿರುವ ಸುಬ್ರಹ್ಮಣಿಯನ್ ಸ್ವಾಮಿ, ಈಗ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಮಿತಿ ತಮ್ಮ ಸಲಹೆ ಕೇಳಿದೆ ಎಂದು ಹೇಳಿದ್ದಾರೆ.
ನೆನ್ನೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ರಾಮ ಮಂದಿರ ಮಧ್ಯಸ್ಥಿಕೆ ಸಮಿತಿ, ರಾಮಜನ್ಮಭೂಮಿ ಸಮಸ್ಯೆ ಬಗೆಹರಿಸುವುದಕ್ಕೆ ಸಲಹೆ ನೀಡಲು ಆಹ್ವಾನಿಸಿದೆ. ಇದಕ್ಕಾಗಿ ದಿನಾಂಕ ನಿಗದಿಯಾಗುತ್ತಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಸಮಿತಿಯನ್ನು ರಚನೆ ಮಾಡಿತ್ತು. ಈ ಮಧ್ಯಸ್ಥಿಕೆ-ಮಾತುಕತೆ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದ್ದು 8 ವಾರಗಳಲ್ಲಿ ಮುಕ್ತಾಯಗೊಳ್ಳಬೇಕಿದೆ.