ದೇಶ

1 ಗಂಟೆಯೊಳಗೆ ಪಾಕ್ ಧೂಳಿಪಟ, ಆದರೆ ಚೀನಾ ವಿರುದ್ಧ ಬಾಯಿ ಬಿಡುತ್ತಿಲ್ಲ ಯಾಕೆ?: ಮೋದಿಗೆ ಹಾಜಿ ಪ್ರಶ್ನೆ

Vishwanath S
ಕಿಷನ್ ಗಂಜ್(ಬಿಹಾರ): ಭಾರತ ಮನಸ್ಸು ಮಾಡಿದರೆ 1 ಗಂಟೆಯೊಳಗೆ ಪಾಕಿಸ್ತಾನ ಸರ್ವನಾಶವಾಗುತ್ತೆ. ಆದರೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಚೀನಾ ವಿರುದ್ಧ ಈಗಲೂ ಒಂದೇ ಒಂದು ಮಾತೂ ಆಡುತ್ತಿಲ್ಲ ಅಂತಾ ಆರ್ಜೆಡಿ ಶಾಸಕ ಹಾಜಿ ಸುಭಾನ್ ಪ್ರಶ್ನಿಸಿದ್ದಾರೆ.
22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನ ಉತ್ತರಪ್ರದೇಶದಷ್ಟಿದೆ. ಇನ್ನು ಮೌಲಾನಾ ಮಸೂದ್ ಅಜರ್ ಸಾಬ್ ರನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಅಡ್ಡಗಾಲು ಹಾಕುತ್ತಿದೆ. ಹೀಗಿದ್ದರು ಭಾರತದ ಪ್ರಧಾನಿಯರು ಚೀನಾ ವಿರುದ್ಧ ಒಂದು ಮಾತನ್ನು ಆಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಭಾರತದ ಪ್ರಸ್ತಾವನೆಯ ವಿರುದ್ಧ ವಿಶ್ವಸಂಸ್ಥೆಯಲ್ಲಿ ಚೀನಾ ತನ್ನ ವಿಟೊ ಪವರ್ ಬಳಸಿ ಅಡ್ಡಗಾಲು ಹಾಕುತ್ತಿದೆ. ಹೀಗಿದ್ದರು ಪ್ರಧಾನಿ ಮೋದಿ ಅವರು ಪಾಕಿಸ್ತಾನ ವಿರುದ್ಧ ಮಾತಾನಾಡುತ್ತಾರೆ ಹೊರತು ಚೀನಾ ವಿರುದ್ಧವಲ್ಲ ಎಂದು ಹೇಳಿದ್ದಾರೆ.
SCROLL FOR NEXT