ದೇಶ

ವಿವಾದಿತ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ವಿರುದ್ಧ ಇ.ಡಿ. ಚಾರ್ಜ್ ಶೀಟ್

Srinivas Rao BV
ಮುಂಬೈ: ದೇಶ ಬಿಟ್ಟು ತಲೆಮರೆಸಿಕೊಂಡಿರುವ ವಿವಾದಿತ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ. 
2007 ರಲ್ಲಿ ಹಾಗೂ 2011 ರಲ್ಲಿ ಮುಂಬೈ ನಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಮಾಡಿದ್ದ ಭಾಷಣಗಳ ಆಧಾರದಲ್ಲಿ ಹಾಗೂ ಅಕ್ರಮವಾಗಿ 193.06 ಕೋಟಿ ರೂಪಾಯಿ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ. 
ಹಣ ವರ್ಗಾವಣೆ ಮಾಡಿರುವ ಜಾಕಿರ್ ನಾಯ್ಕ್ ಗೆ ಶಿಕ್ಷೆ ನೀಡಬೇಕು ಹಾಗೂ ಆತನಿಗೆ ಸೇರಿದ 50.46 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ವಶಕ್ಕೆಪಡೆದುಕೊಳ್ಳಬೇಕೆಂದು ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಕೆ ವೇಳೆ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ. 
2016 ರಲ್ಲಿ ಭಾರತದಿಂದ ತಲೆ ಮರೆಸಿಕೊಂಡಿರುವ ಜಾಕಿರ್ ನಾಯ್ಕ್ ವಿರುದ್ಧ ದಾಖಲಾಗುತ್ತಿರುವ 2 ನೇ ಚಾರ್ಜ್ ಶೀಟ್ ಇದಾಗಿದೆ. 
SCROLL FOR NEXT