ದೇಶ

ತಮಿಳುನಾಡು: ಕೊಯಂಬತ್ತೂರಿನಲ್ಲಿ ಡ್ರಗ್ಸ್ ದಂಧೆ, 150 ಕಾಲೇಜು ವಿದ್ಯಾರ್ಥಿಗಳ ಬಂಧನ

Nagaraja AB

ಕೊಯಂಬತ್ತೂರು: ಪೊಲಾಚಿ ಜಿಲ್ಲೆಯ ಬಳಿ ರೆಸಾರ್ಟ್ ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ಮಾರಾಟ ಜಾಲದ ಮೇಲೆ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿದ್ದು, ಸುಮಾರು 150 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿಯಿಂದಲೂ ರೆಸಾರ್ಟ್ ನಲ್ಲಿರುವ ನೂರಾರು ಯುವಕರು ಮಾದಕ ವ್ಯಸನಿಗಳಾಗಿದ್ದಾರೆ ಎಂಬ ದೂರಿನ ಆಧಾರದ ಮೇಲೆ  ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಗಾಂಜಾ, ಕೊಕೈನ್, ಮತ್ತಿತರ ಮಾದಕ ವಸ್ತು ಸೇವಿಸಿದ್ದ ಆರೋಪದ ಮೇರೆಗೆ 159 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಹುತೇಕ ವಿದ್ಯಾರ್ಥಿಗಳು ನೆರೆಯ ಕೇರಳದಿಂದ ಬಂದವರಾಗಿದ್ದು, ಕೊಯಂಬತ್ತೂರು ಸುತ್ತಮುತ್ತಲಿನ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ರೆಸಾರ್ಟ್ ನ ಆರು ನೌಕರನ್ನು ಬಂಧಿಸಲಾಗಿದ್ದು, ರೆಸಾರ್ಟ್ ನಲ್ಲಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ರೆಸಾರ್ಟ್ ಗೆ ಬೀಗ ಜಡಿಯಲು ಜಿಲ್ಲಾಧಿಕಾರಿ ಕೆ ರಾಜಮಣಿ ಆದೇಶ ಹೊರಡಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT