ಸಂಜಯ್ ರಾವತ್ ಮತ್ತು ಸೀತಾರಾಮ ಯೆಚೂರಿ 
ದೇಶ

ನಿಮ್ಮ ಹೆಸರನ್ನು ಬಾಬರ್ ಅಥವಾ ಅಕ್ಬರ್ ಎಂದು ಬದಲಿಸಿಕೊಳ್ಳಿ: ಸೀತಾರಾಮ ಯೆಚೂರಿಗೆ ಸಂಜಯ್ ರಾವತ್ ತಿರುಗೇಟು

ಹಿಂದೂ ಧರ್ಮದಲ್ಲಿ ಹಿಂಸಾಚಾರವಿದೆ ಎಂದು ಹೇಳಿದ್ದ ಸಿಪಿಐ(ಐಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಪ್ಜಲ್ ಎಂದು ...

ಮುಂಬಯಿ: ಹಿಂದೂ ಧರ್ಮದಲ್ಲಿ ಹಿಂಸಾಚಾರವಿದೆ ಎಂದು ಹೇಳಿದ್ದ ಸಿಪಿಐ(ಐಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ತಮ್ಮ ಹೆಸರನ್ನು ಬಾಬರ್ ಅಥವಾ ಅಪ್ಜಲ್ ಎಂದು ಬದಲಿಸಿಕೊಳ್ಳಲಿ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
ಹಿಂದೂ ಧರ್ಮ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ  ಹಿಂಸಾಚಾರದ ಘಟನೆಗಳೇ ತುಂಬಿವೆ ಎಂದು ಸಿಪಿಐ -ಎಂ ನಾಯಕ ಸೀತಾರಾಂ ಯೆಚೂರಿ  ಟೀಕಿಸಿದ್ದರು.
ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳನ್ನು ಗೌರವಿಸದಿದ್ದರೇ ಸೀತಾರಾಯ ಯೆಚೂರಿ, ತಮ್ಮ ಹೆಸರನ್ನು ಬಾಬರ್, ಅಪ್ಝಲ್ ಖಾನ್  ಅಥವಾ ಔರಂಗ್ ಜೇಬ್ ಅಥವಾ ಚೆಂಗಿಸ್ ಖಾನ್ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಹಲವು ರಾಜರು ಹಾಗೂ ಸಂಸ್ಥಾನಗಳು ಹೋರಾಟ ನಡೆಸಿದ್ದಾರೆ. ರಾಮಾಯಣ ಹಾಗೂ ಮಹಾಭಾರತದಲ್ಲೂ ಕೂಡಾ ತೀವ್ರ ಹಿಂಸಾಚಾರವೇ ತುಂಬಿವೆ. ಆದರೂ ಪ್ರಚಾರಕರು ಹಿಂದೂಗಳಿಗೆ ಹಿಂಸಾಚಾರದಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ. ಇದರ ಹಿಂದಿನ ಸಿದ್ಧಾಂತ ಏನು ?  ಹಿಂಸಾಚಾರ ತುಂಬಿರುವ ಧರ್ಮದಲ್ಲಿ ನಾವು ನಾವು ಹಿಂದೂಗಳೆ ಇಲ್ಲ ಎಂದಿದ್ದರು.
ಬಿಜೆಪಿ ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಆರೋಪಿಸಿರುವ ಸೀತಾರಾಂ ಯೆಚೂರಿ, ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜನರ ಪ್ರಜಾಸತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!