ನರೇಂದ್ರ ಮೋದಿ 
ದೇಶ

ನನ್ನ ತಂದೆಯನ್ನು ಎಳೆದು ತಂದು ಉಳಿಯಲಾರಿರಿ, ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ: ರಾಹುಲ್ ತಿರುಗೇಟು

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ...

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬದುಕು ಭ್ರಷ್ಟಾಚಾರಿ ನಂಬರ್1 ಎಂಬ ಹಣೆ ಪಟ್ಟಿಯೊಂದಿಗೆ ಅಂತ್ಯವಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ, ನನ್ನ ತಂದೆಯನ್ನು ಎಳೆದು ತಂದು ನೀವು ಉಳಿಯಲಾರಿರಿ,, ನಮ್ಮ ತಂದೆ ನಿಮ್ಮನ್ನು ರಕ್ಷಿಸಲಾರರು, ನಿಮಗೆ ನನ್ನ ಅಪಾರ ಪ್ರೀತಿ ಮತ್ತು ದೊಡ್ಡ ಅಪ್ಪುಗೆ ಎಂದು ರಾಹುಲ್  ಗಾಂಧಿ ಟ್ವೀಟ್ ಮಾಡಿದ್ದಾರೆ. 
ರಾಹುಲ್ ಗಾಂಧಿ ಅವರೇ 1980 ರಲ್ಲಿ ಪ್ರಧಾನಿಯಾಗಿದ್ದ  ಕಾಲದಲ್ಲಿ ಬೋಪೋರ್ಸ್ ಹಗರಣ ನಡೆದಿತ್ತು, ಸೈನ್ಯಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವ ಸ್ವೀಡೀಶ್ ಮೂಲದ ಬೋಪೋರ್ಸ್ ಕಂಪನಿಯಿಂದ ರಾಜೀವ್ ಗಾಂಧಿ  ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು.  ಈ ಮೂಲಕ ನಂಬರ್ 1 ಭ್ರಷ್ಟಾಚಾರಿ ಎಂಬ ಹಣೆ ಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯೊಂದರಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಗೆ ಆಕ್ಷೇಪ: ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಸರ್ಕಾರಿ ಗೌರವಗಳೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

No Toll For Indian Tankers': ಅಮೆರಿಕ ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ!

ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ: 9 ಮಂದಿ ಬಂಧನ; ಕೊಲೆಗೆ ನಿಜವಾದ ಕಾರಣ ಬಿಚ್ಚಿಟ್ಟ ಪೊಲೀಸರು

SCROLL FOR NEXT