41 killed after Russian passenger plane catches fire mid-air
ಮಾಸ್ಕೋ: ತುರ್ತು ಭೂಸ್ಪರ್ಶ ಮಾಡಿದ ವಿಮಾನ ನಿಲ್ದಾಣದಲ್ಲೇ ಹೊತ್ತಿ ಉರಿದಿದ್ದು, 41 ಜನರು ಸಾವನ್ನಪ್ಪಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ತುರ್ತು ನಿರ್ಗಮನದ ಮೂಲಕ ಪಾರಾಗಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ವಿಮಾನದಲ್ಲಿ 78 ಜನರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಯಾರಾದರೂ ಪಾರಾಗಿದ್ದರೆ ಅದೊಂದು ಪವಾಡವೇ ಸರಿ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಘಟನೆಯಲ್ಲಿ ತೀವ್ರಗಾಯಗೊಂಡಿರುವ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರು ಮಹಿಳೆಯರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ರಷ್ಯಾದ ಆರೋಗ್ಯ ಇಲಾಖೆ ಹೇಳಿದೆ.
ಸುಖೋಯ್ ಸೂಪರ್ ಜೆಟ್-100 ಮಾಸ್ಕೋದ ಶೆರ್ಮೆಟಿವೊ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 6.02 ಗಂಟೆಗಳಿಗೆ ಮರ್ಮನ್ಸ್ಕ್ ಗೆ ಟೇಕ್ ಆಫ್ ಆಗಿತ್ತು. ಆದರೆ ತಾಂತ್ರಿಕ ದೋಷಗಳಿಂದಾಗಿ ವಿಮಾನ ಮಾಸ್ಕೋ ನಿಲ್ದಾಣಕ್ಕೆ ವಾಪಸ್ ಆಗಿತ್ತು. ವಿಮಾನ ನಿಲ್ದಾಣಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು 41 ಜನರು ಮೃತಪಟ್ಟಿದ್ದಾರೆ.