ಝಾಕೀರ್ ನಾಯಕ್ 
ದೇಶ

ಈ ಒಂದು ಷರತ್ತಿಗೆ ಒಪ್ಪಿದರೆ ಭಾರತಕ್ಕೆ ವಾಪಸ್ ಬರೋಕೆ ಝಾಕೀರ್ ನಾಯಕ್ ರೆಡಿ!

ಇಸ್ಲಾಮಿಕ್ ಶಿಕ್ಷಕ, ಭಾಷಣಕಾರ ಝಾಕೀರ್ ನಾಯಕ್ ಭಾರತಕ್ಕೆ ಹಿಂದಿರುಗಲು ಸಿದ್ದರಾಗಿದ್ದಾರೆ, ಆದರೆ ಈ ಒಂದು ಷರತ್ತಿನಮೇಲೆ!

ನವದೆಹಲಿ: ಇಸ್ಲಾಮಿಕ್ ಶಿಕ್ಷಕ,  ಭಾಷಣಕಾರ ಝಾಕೀರ್ ನಾಯಕ್ ಭಾರತಕ್ಕೆ ಹಿಂದಿರುಗಲು ಸಿದ್ದರಾಗಿದ್ದಾರೆ, ಆದರೆ ಈ ಒಂದು ಷರತ್ತಿನ ಮೇಲೆ! 
ತಾನು ಆರೋಪಿ ಎಂದು ಸಾಬೀತಾಗುವವರೆಗೆ ಆತನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದ್ದಾದರೆ ತಾನು ಭಾರತಕ್ಕೆ ಹಿಂತಿರುಗಲು ಸಿದ್ದ ಎಂದು ಝಾಕೀರ್ ನಾಯಕ್ ಹೇಳಿದ್ದಾರೆ.
ಭಾರತದಿಂದ ಪಲಾಯನ ಮಾಡಿದ ಝಾಕೀರ್ ನಾಯಕ್ 2016ರಿಂದಲೂ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾರೆ. ಮಲೇಷಿಯಾ ಸರ್ಕಾರ ಅವರಿಗೆ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ.
"ದಿ ವೀಕ್" ಪತ್ರಿಕೆ ಸಂದರ್ಶನವೊಂದರಲ್ಲಿ ಧಾರ್ಮಿಕ ಬೋಧಕರಾದ ಝಾಕೀರ್ ನಾಯಕ್ ತಾನು  ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದೇನೆ. ಮತ್ತು ಅದು ಈಗಿರುವುದಕ್ಕಿಂತ ಮುಂಚಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿತ್ತು. ಎಂದಿದ್ದಾರೆ.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ  ನೀವು ಸರ್ಕಾರದ ವಿರುದ್ಧ ಮಾತನಾಡಿದ್ದಾದರೂ ಸಹ ಕನಿಷ್ಟ 80 ಪ್ರತಿಶತದಷ್ಟು ನಿಮಗೆ ನ್ಯಾಯ ಲಭಿಸುತ್ತಿತ್ತು. ಆದರೆ ಈಗ ಅಂತಹಾ ಅವಕಾಶ ಕೇವಲ 10ರಿಂದ 20 ಶೇಕಡ ಮಾತ್ರವೇ ಇದೆ.
"ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ನಾವೊಮ್ಮೆ ಇತಿಹಾಸವನ್ನು ನೋಡಿದರೆ ಒಮ್ಮೆ ಉಗ್ರಕೃತ್ಯಗಳ ಆರೋಪ ಹೊತ್ತ 90 ಪ್ರತಿಶತದಷ್ಟು ಮುಸ್ಲಿಮರು 10-15 ವರ್ಷಗಳ ನಂತರ ಸ್ವತಂತ್ರವಾಗುತ್ತಾರೆ ಅಥವಾ ಆರೋಪಮುಕ್ತರಾಗುತ್ತಾರೆ. ಹಾಗೆ ನಾನು ಸಹ ಸರಾಸರಿ ಹತ್ತು ವರ್ಷಗಳ ಕಾಲ ಸೆರೆಯಲ್ಲಿರಬೇಕಾಗುವುದು. ಆಗ ನನ್ನ ಯೋಜನೆಗಳೆಲ್ಲವೂ ನಾಶವಾಗಲಿದೆ.ನಾನೇಕೆ ಮೂರ್ಖನಾಗಲಿ?" ಅವರು ಕೇಳಿದ್ದಾರೆ.
ಅಲ್ಲದೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಯಸಿದ್ದಾದರೆ ಮಲೇಷಿಯಾದಲ್ಲೇ ನನ್ನನ್ನು ಪ್ರಶ್ನಿಸಬಹುದು ಎಂದೂ ಅವರು ಹೇಳಿದ್ದಾರೆ.
ತಮಗೆ ನ್ಯಾಯ ದೊರಕುವ ಭರವಸೆ ಇದ್ದದ್ದಾದರೆ ತಾವು ಭಾರತಕ್ಕೆ ಮರಳುವಿರೆ ಎಂದು ಕೇಳಲು ಝಾಕೀರ್ ನಾಯಕ್ , "ಭಾರತದ ಸುಪ್ರೀಂ ಕೋರ್ಟ್ ನಿಂದ ಭರವಸೆ ಇದ್ದಲ್ಲಿ ನಾನು ಭಾರತಕ್ಕೆ ಮರಳುತ್ತೇನೆ. ಅದೆಂದರೆ ನನ್ನ ಮೇಲಿನ ಆರೋಪ ಸಾಬೀತಾಗುವವರೆಗೆ ನನ್ನನ್ನು ಬಂಧಿಸುವುದಿಲ್ಲ ಎಂದು ಕೋರ್ಟ್ ಭರವಸೆ ನೀಡಿದ್ದಾದರೆ ನಾನು ಭಾರತಕ್ಕೆ ಆಗಮಿಸುವೆ" ಎಂದರು.
ಡಾಕಾದ ಪ್ರಖ್ಯಾತ  ಗುಲ್ಷನ್ ನ ಹೋಲಿ ಆರ್ಟಿಸನ್ ಬೇಕರಿ (ಕೆಫೆ) ಮೇಲೆ ಭಯೋತ್ಪಾದಕ ದಾಳಿಯ ಘಟನೆಯಲ್ಲಿ ಝಾಕೀರ್ ಆರೋಪಿ ಎಂದು ಎನ್ಐಎ ಗುರುತಿಸಿದೆ. ಜುಲೈ 1, 2016ರ ತಡರಾತ್ರಿ ನಡೆಇದ್ದ ಉಗ್ರದಾಳಿಯಲ್ಲಿ ಹೆಚ್ಚಾಗಿ ವಿದೇಶೀಯರೇ ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT