ರಾಹುಲ್ ಗಾಂಧಿ, ಪ್ರಧಾನಿ ಮೋದಿ
ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ ಆಗಿಯೇ ಮೃತಪಟ್ಟರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ ದಿನದಿಂದಲೂ ನಿರಂತರವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಒತ್ತಡದಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಇತ್ತೀಚಿಗೆ ನೀಡಿರುವ ಹೇಳಿಕೆ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಹತಾಶೆಗೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಡಿಯರ್ ಮೋದಿ ಇತ್ತೀಚಿಗೆ ಸಂದರ್ಶನ ಹಾಗೂ ವಿಡಿಯೋಗಳಲ್ಲಿ ನೀಡಿರುವ ಹೇಳಿಕೆ ಒತ್ತಡದಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದೀರಿ, ಫಲಿತಾಂಶದ ಬಗ್ಗೆ ಹತಾಶರಾಗಿದ್ದೀರಿ ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೆಲ ವಾರಗಳಿಂದಲೂ ನೆಹರು ಕುಟುಂಬದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ರಾಜೀವ್ ಗಾಂಧಿ ಕುಟುಂಬ ಯುದ್ಧ ನೌಕೆ ಐಎನ್ ಎಸ್ ವಿರಾಟ್ ನ್ನು ವೈಯಕ್ತಿಕ ಟ್ಯಾಕ್ಸಿಯಾಗಿ ಮಾಡಿಕೊಂಡಿದ್ದರು ಎಂದು ಬುಧವಾರ ಮೋದಿ ಆರೋಪಿಸಿದ್ದರು. ಆದಾಗ್ಯೂ, ಈ ಆರೋಪವನ್ನು ಐಎನ್ ಎಸ್ ವಿರಾಟ್ ಮಾಜಿ ಕಮಾಂಡಿಂಗ್ ಆಫೀಸರ್ ತಳ್ಳಿಹಾಕಿದ್ದರು.