ದೇಶ

ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಮೇಲೆ ಹೋಗಿದ್ದಕ್ಕೆ ಗುಜರಾತ್ ನ ಗ್ರಾಮದ ದಲಿತರಿಗೆ ಬಹಿಷ್ಕಾರ!

Sumana Upadhyaya
ಅಹ್ಮದಾಬಾದ್: ಮದುವೆ ಮೆರವಣಿಗೆಯಲ್ಲಿ ದಲಿತ ಮದುಮಗ ಕುದುರೆ ಸವಾರಿ ಮಾಡಿದ್ದಕ್ಕೆ ದಲಿತ ಸಮುದಾಯದವರಿಗೆ ಮೇಲ್ಜಾತಿಯವರು ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ಗುಜರಾತ್ ನ ಗ್ರಾಮವೊಂದರಲ್ಲಿ ನಡೆದಿದೆ.
ಗುಜರಾತ್ ರಾಜ್ಯದ ಮೆಹ್ಸಾನಾ ಜಿಲ್ಲೆಯ ಲಾರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇದು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ತವರು ಜಿಲ್ಲೆಯಾಗಿದೆ. ತಮ್ಮನ್ನು ಬಹಿಷ್ಕಾರ ಹಾಕಿರುವುದರಿಂದ ಹಾಲು ಸೇರಿದಂತೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳು ಸಿಗುತ್ತಿಲ್ಲ, ನಾವು ಹೋಗಿ ಕೇಳಿದರೆ ಕೊಡಲು ನಿರಾಕರಿಸುತ್ತಾರೆ. ಆಟೋರಿಕ್ಷಾ ಚಾಲಕರು ಕೂಡ ಮೇಲ್ಜಾತಿಯವರ ಭಯದಿಂದ ನಮ್ಮನ್ನು ವಾಹನಕ್ಕೆ ಹತ್ತಲು ಬಿಡುವುದಿಲ್ಲ ಎಂದು ಗ್ರಾಮದ ದಲಿತರು ಹೇಳುತ್ತಾರೆ.
ವಿಷಯ ತಿಳಿದ ಪೊಲೀಸರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಆದೇಶ ನೀಡಿದ್ದ ಗ್ರಾಮದ ಮುಖಂಡ ವಿನುಜಿ ಠಾಕೋರ್ ಸೇರಿದಂತೆ ಇನ್ನೂ ಕೆಲವರನ್ನು ಬಂಧಿಸಿದ್ದಾರೆ.
SCROLL FOR NEXT