ದೇಶ

5 ವರ್ಷಗಳಲ್ಲಿ ಪ್ರಧಾನಿ ಮೋದಿ, ಸಚಿವರ ದೇಶ-ವಿದೇಶ ಪ್ರಯಾಣದ ಖರ್ಚು 393 ಕೋಟಿ

Lingaraj Badiger
ಮುಂಬೈ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರ ದೇಶ-ವಿದೇಶ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರ 393 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂಬುದು ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.
ನಗರದ ಆರ್‌ಟಿಐ ಕಾರ್ಯಕರ್ತ ಅನಿಲ್‌ ಗಲಗಲಿ ಅವರು ಪ್ರಧಾನಿ ಕಾರ್ಯಾಲಯಕ್ಕೆ ಆರ್ ಟಿಐ ಅರ್ಜಿ ಹಾಕಿ ಮಾಹಿತಿ ಕೋರಿದ್ದರು. ಆ ಪ್ರಕಾರ 2014ರ ಮೇ ತಿಂಗಳಿಂದ ಈ ತನಕ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಚಿವರು ದೇಶ-ವಿದೇಶ ಪ್ರಯಾಣಕ್ಕಾಗಿ 393 ಕೋಟಿ ರೂ. ಖರ್ಚು ಮಾಡಿರುವುದಾಗಿ ತಿಳಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ವೆಚ್ಚದ ಬಗ್ಗೆ ರಾಜ್ಯಸಭೆಗೆ ಉತ್ತರ ನೀಡಿದ್ದ ಕೇಂದ್ರ ಸರ್ಕಾರ, 2014ರ ಜೂನ್‌ನಿಂದ ಪ್ರಧಾನಿ ಮೋದಿ ಅವರ ವಿದೇಶ ಪ್ರಯಾಣಕ್ಕಾಗಿ ಬಾಡಿಗೆ ವಿಮಾನಗಳು, ಅವುಗಳ ನಿರ್ವಹಣಾ ವೆಚ್ಚ ಮತ್ತು ಹಾಟ್‌ ಲೈನ್‌ ಸೌಕರ್ಯಗಳಿಗೆಂದು 2,021 ಕೋಟಿ ರೂ. ಖರ್ಚಾಗಿದೆ ಎಂದು ತಿಳಿಸಿತ್ತು. ಆದರೆ ಈಗ ಕೇವಲ 393 ಕೋಟಿ ರೂಪಾಯಿ ಎಂದು ಆರ್ ಟಿಐಗೆ ಉತ್ತರಿಸಿದೆ.
ಗಲಗಲಿ ಅವರು ಪಡೆದಿರುವ ಆರ್‌ಟಿಐ ಮಾಹಿತಿಯ ಪ್ರಕಾರ ಮೋದಿ ಅವರ ದೇಶ-ವಿದೇಶ ಪ್ರಯಾಣ ಖರ್ಚು 311 ಕೋಟಿ ರೂ. ಮತ್ತು ಅವರ ಸಂಪುಟ ಸಚಿವರ ದೇಶ-ವಿದೇಶದ ವಿಮಾನ ಪ್ರಯಾಣ ಖರ್ಚು 82 ಕೋಟಿ ರೂ. ಎಂದು ತಿಳಿಸಲಾಗಿದೆ.
SCROLL FOR NEXT