ದೇಶ

ಪೂರೈಕೆಯಾಗುತ್ತಿದೆ ಕಳಪೆ ಗುಣಮಟ್ಟದ ಯುದ್ಧಸಾಮಗ್ರಿ: ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸೇನೆ ಆತಂಕ!

Srinivas Rao BV
ನವದೆಹಲಿ: ಭಾರತೀಯ ಸೇನೆಯಲ್ಲಿ ಯುದ್ಧಸಾಮಗ್ರಿ ಬಳಕೆ ವೇಳೆ ಅಪಘಾತಗಳು ಹೆಚ್ಚುತ್ತಿದ್ದು, ಸೇನೆಗೆ ಕಳಪೆ ಗುಣಮಟ್ಟದ ಯುದ್ಧಸಾಮಗ್ರಿಪೂರೈಕೆಯಾಗುತ್ತಿವೆ ಎಂದು ಸ್ವತಃ ಆತಂಕ ವ್ಯಕ್ತಪಡಿಸಿದೆ. 
ಟ್ಯಾಂಕ್, ಆರ್ಟಿಲರಿ, ಏರ್  ಡಿಫೆನ್ಸ್ ಹಾಗೂ ಗನ್ ಗಳಿಗೆ ಸರ್ಕಾರಿ ಸ್ವಾಮ್ಯದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ ಬಿ) ಕಡಿಮೆ ಗುಣಮಟ್ಟದ ಯುದ್ಧಸಾಮಗ್ರಿಪೂರೈಕೆಯಿಂದಾಗಿ ಹೆಚ್ಚುತ್ತಿರುವ ಅಪಘಾತಗಳು ಸಂಭವಿಸುತ್ತಿವೆ ಎಂದು ಸೇನೆ ಆತಂಕ ವ್ಯಕ್ತಪಡಿಸಿದೆ. 
ರಕ್ಷಣಾ ಸಚಿವಾಲಯಕ್ಕೆ ಯುದ್ಧಸಾಮಗ್ರಿಗಳಿಂದ ಉಂಟಾಗುತ್ತಿರುವ ಅಪಘಾತ, ಅದರಿಂದ ಉಂಟಾಗುತ್ತಿರುವ ಗಾಯ, ಪ್ರಾಣಹಾನಿಗೆ  ಸಂಬಂಧಿಸಿದಂತೆ ಸೇನೆ ಮಾಹಿತಿ ನೀಡಿದ್ದು, ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದೆ. 
ಮುಂದುವರೆದು, ಈ ಘಟನೆಯಿಂದಾಗಿ ಸೇನೆಯಲ್ಲಿ ಕೆಲವು ನಿರ್ದಿಷ್ಟ ಯುದ್ಧಸಾಮಗ್ರಿಗಳ ಕುರಿತು ಆತ್ಮವಿಶ್ವಾಸ ಕಡಿಮೆಯಾಗಿತ್ತಿದೆ ಎಂದು ಸೇನೆ ರಕ್ಷಣ ಸಚಿವಾಲಯಕ್ಕೆ ಹೇಳಿದೆ. 
SCROLL FOR NEXT