ದೇಶ

ಬೋಫೋರ್ಸ್ ಹಗರಣ: ಹೆಚ್ಚಿನ ತನಿಖೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಸಿಬಿಐ

Raghavendra Adiga
ನವದೆಹಲಿ: ರಾಜಕೀಯ ಸೂಕ್ಷ್ಮವಾಗಿರುವ  64 ಕೋಟಿ ರೂ. ಬೋಫೋರ್ಸ್ ಫಿರಂಗಿ ಖರೀದಿ ಹಗರಣದ ಕುರಿತು ಮುಂದಿನ ಹಂತದ ತನಿಖೆಗೆ ಅನುಮತಿ ಕೋರಿ ದೆಹಲಿ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಬಿಐ ಹಿಂಪಡೆದಿದೆ.
ಫೆಬ್ರವರಿ 1, 2018 ರಂದು ಸಲ್ಲಿಸಲಾದ ಅರ್ಜಿಯನ್ನು ಹಿಂಪಡೆಯುವುದಾಗಿ ದೆಹಲಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವನ್ ಕುಮಾರ್ ಕಶ್ಯಪ್ ಅವರ ಪೀಠಕ್ಕೆ ಸಿಬಿಐ ಹೇಳಿದೆ.
ಇದಕ್ಕೆ ಮುನ್ನ ಸಿಬಿಐ ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ರವಾನಿಸಿದ್ದು ತಾವು ಮತ್ತೆ ಹೊಸ ದಾಖಲೆಗಳು, ಸಾಕ್ಷಿಗಳನ್ನು ಹೊಂದಿದ್ದೇವೆ. ಹಾಗಾಗಿ ಬೋಫೋರ್ಸ್ ಬಗೆಗೆ ಹೊಸದಾಗಿ ತನಿಖೆ ಮುಂದುವರಿಸಲು ಅವಕಾಶ ಕಲ್ಪಿಸಿಕೊಡುವಂತೆ ಕೇಳಿತ್ತು.
ತಾನೀಗ ಅರ್ಜಿಯನ್ನು ಹಿಂಪಡೆಯುತ್ತಿದ್ದು ಮುಂದಿನ ಕ್ರಮಗಳ ಕುರಿತು ಸಧ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತನಿಖಾ ಏಜನ್ಸಿ ಕೋರ್ಟ್ ಗೆ ಹೇಳಿದೆ.
ಇನ್ನು ಕಳೆದ ಡಿಸೆಂಬರ್ 4, 2018ರಂದು ಬೋಪೋರ್ಸ್ ಹಗರಣ ಸಂಬಂಧ ತನಿಖೆಗೆ ಸಿಬಿಐಗೆ ಏಕೆ ಅನುಮತಿ ಕೊಡಬೇಕೆಂದು ನ್ಯಾಯಾಲಯವು ಪ್ರಶ್ನಿಸಿತ್ತು. 
SCROLL FOR NEXT