ದೇಶ

ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ: ಕಮಲ್ ಹಾಸನ್

Srinivasamurthy VN
ಕೊಯಮತ್ತೂರು: ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಈ ಹಿಂದೆ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ನಟ ಕಮಲ್ ಹಾಸನ್ ಮೇಲೆ ನಿನ್ನೆ ಚಪ್ಪಲಿ ಮತ್ತು ಇಂದು ಮೊಟ್ಟೆ, ಕಲ್ಲು ತೂರಾಟ ಮಾಡಲಾಗಿತ್ತು. ತಮ್ಮ ಮೇಲಿನ ದಾಳಿಗಳ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುನ ನಟ ಕಮಲ್ ಹಾಸನ್, ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ. 
ಇದೇ ಹಿನ್ನಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ಒಂದು ವೇಳೆ ನನ್ನ ಬಂಧಿಸುವುದಾದರೇ ಬಂಧಿಸಲಿ.. ಆದರೆ ನನ್ನ ಬಂಧನದಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ. ಇದು ಎಚ್ಚರಿಕೆಯಲ್ಲ ಕೇವಲ ಸಲಹೆ ಮಾತ್ರ ಎಂದು ಹೇಳಿದರು.
ಪ್ರತೀಯೊಂದು ಧರ್ಮದಲ್ಲಿ ಅದರದೇ ಆದ ಭಯೋತ್ಪಾದನೆ ಇರುತ್ತದೆ. ನಾವು ಯಾರೂ ನಾವು ಪವಿತ್ರರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಪ್ರತೀಯೊಂದು ಧರ್ಮದಲ್ಲೂ ಆತಂಕವಾದಿಗಳು ಇದ್ದಾರೆ ಎಂಬುದನ್ನು ಇತಿಹಾಸವೇ ತಿಳಿಸಿದೆ ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ನಟ ಕಮಲ್ ಹಾಸನ್ ಮೇಲೆ ಆಕ್ರೋಶಗೊಂಡಿದ್ದ ಹಿಂದೂಪರ ಕಾರ್ಯಕರ್ತರು, ಕಮಲ್ ಹಾಸನ್ ಪಾಲ್ಗೊಂಡಿದ್ದ ಕಾರ್ಯಕ್ರಮಗಳ ಮೇಲೆ ದಾಳಿ ಮಾಡಿದ್ದಾರೆ. ನಿನ್ನೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಮಲ್ ಹಾಸನ್ ಮೇಲೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಚಪ್ಪಲಿ ಎಸೆದಿದ್ದರು. ಇಂದು ಕೊಯಮತ್ತೂರಿನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮೊಟ್ಟೆ ಮತ್ತು ಕಲ್ಲು ತೂರಾಟ ಮಾಡಿದ್ದಾರೆ.
SCROLL FOR NEXT