ದೇಶ

ಶರದಾ ಹಗರಣ: ದೀದಿಗೆ ಭಾರಿ ಹಿನ್ನಡೆ, ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಗೆ ಬಂಧನ ಭೀತಿ!

Srinivasamurthy VN
ನವದೆಹಲಿ: ಶರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಮಾಜಿ ಕೋಲ್ಕತಾ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಕೋರ್ಟ್ ನೀಡಿದ್ದ 'ಬಂಧನದಿಂದ ಸುರಕ್ಷತೆ' ಆದೇಶವನ್ನು ತೆರುವು ಗೊಳಿಸಿದ್ದು, ರಾಜೀವ್ ಕುಮಾರ್ ಅವರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.
ಶರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಆಧಿಕಾರಿ ರಾಜೀವ್ ಕುಮಾರ್ ಅವರ ವಿರುದ್ಧ ಸಾಕ್ಷ್ಯ ನಾಶ ಪಡಿಸಿದ ಗಂಭೀರ ಆರೋಪವಿದ್ದು, ಈ ಹಿಂದೆ ಇದಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅಧಿಕಾರಿಗಳು ಮುಂದಾದಾಗ ಅವರನ್ನೇ ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಈ ವೇಳೆ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಹೈಡ್ರಾಮ ಏರ್ಪಟ್ಟಿತ್ತು. 
ಕೇಂದ್ರ ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಆಹೋರಾತ್ರಿ ಧರಣಿ ಕೂಡ ನಡೆಸಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ರಾಜೀವ್ ಕುಮಾರ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿತ್ತು. ಇದೀಗ ಸಿಬಿಐ ವಾದಕ್ಕೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್ ತಾನು ರಾಜೀವ್ ಕುಮಾರ್ ಅವರ ಮೇಲೆ ವಿದಿಸಿದ್ದ ಬಂಧನದಿಂದ ಸುರಕ್ಷತೆ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ. ಆ ಮೂಲಕ ಅಗತ್ಯತೆ ಇದ್ದರೆ ರಾಜೀವ್ ಕುಮಾರ್ ರನ್ನು ಸಿಬಿಇ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅವಕಾಶ ನೀಡಿದಂತಾಗಿದೆ.
SCROLL FOR NEXT