ದೇಶ

ಗಾಳಿಯಿಂದಲೂ ಶತೃಪಾಳಯದ ಗುರಿ ಉಡಾಯಿಸಲಿದೆ 'ಬ್ರಹ್ಮೋಸ್'!

Srinivasamurthy VN
ನವದೆಹಲಿ: ಭಾರತೀಯ ರಕ್ಷಣಾ ವಲಯದಲ್ಲಿ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್, ಮತ್ತೊಂದು ಮಹತ್ವದ ಸಾಧನೆ ಗೈದಿದೆ.
ಈ ಹಿಂದೆ ಭೂಮಿ ಮತ್ತು ಸಮುದ್ರದ ಮೇಲಿನ ಗುರಿಗಳನ್ನು ಯಶಸ್ವಿಯಾಗಿ ದ್ವಂಸ ಮಾಡಿದ್ದ ಬ್ರಹ್ಮೋಸ್ ಇದೀಗ ಆಗಸದ ಮೇಲಿಂದಲೂ ದಾಳಿ ಮಾಡಲು ಸಜ್ಜಾಗಿದೆ. ಈ ಸಂಬಂಧ ಇಂದು ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಭಾರತೀಯ ವಾಯು ಪಡೆ ಇಂದು ತನ್ನ ಫೈಟರ್​ ಜೆಟ್ ಸುಖೋಯ್ 30 ಎಂಕೆ ಐ ಯುದ್ದ ವಿಮಾನದ ಸಹಾಯದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಮಾಕ್ 2.8 ವೇಗದಲ್ಲಿ ಕ್ರಮಿಸಿದ ಕ್ಷಿಪಣಿ ನಿಗದಿತ ಗುರಿಯನ್ನು ಧ್ವಂಸ ಮಾಡುವ ಮೂಲಕ ಯಶಸ್ವಿಯಾಗಿದೆ. ಕ್ಷಿಪಣಿಯ ವೇಗ ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಿತ್ತು ಎನ್ನಲಾಗಿದೆ. 
ಯುದ್ಧ ವಿಮಾನದಿಂದ ಬೇರ್ಪಟ್ಟು ಹೊರಟ ಕ್ಷಿಪಣಿ ನಿಗದಿ ಪಡಿಸಿದ್ದ ಗುರಿಯನ್ನು ಕರಾರುವಕ್ಕಾಗಿ ತಲುಪಿದೆ. ಅಂತೆಯೇ ಕ್ಷಿಪಣಿಯ ಈ ಕಾರ್ಯಾಚರಣೆ ತುಂಬಾ ಸುಲಭವಾಗಿತ್ತು ವಾಯುಸೇನೆ ವಕ್ತಾರ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ಹೇಳಿದ್ದಾರೆ.  2.5 ಟನ್ ತೂಕದ ಈ ಕ್ಷಿಪಣಿ ಇದೀಗ ಆಗಸದಿಂದ ಭೂಮಿ ಮೇಲಿನ ಗುರಿಗಳನ್ನು, ಆಗಸದಿಂದ ಆಗಸದ ಮೇಲಿನ ಗುರಿಗಳನ್ನು ಮತ್ತು ಸಮುದ್ರದಿಂದ ಆಗಸದ ಮೇಲಿನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದಂತಾಗಿದೆ. ಪ್ರಸ್ತುತ ಇಂದು ಪರೀಕ್ಷೆ ನಡೆಸಿದ ಬ್ರಹ್ಮೋಸ್ ಕ್ಷಿಪಣಿ ಸುಮಾರು 300 ಕಿ.ಮೀ ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾದರಿಯ ಕ್ಷಿಪಣಿ ಹೊಂದಿದ ವಿಶ್ವದ ಮೊದಲ ವಾಯು ಸೇನೆ
ಇನ್ನು ಈ ಬ್ರಹ್ಮೋಸ್ ಯಶಸ್ವೀ ಪ್ರಯೋಗದಿಂದ ಈ ಮಾದರಿಯ ಕ್ಷಿಪಣಿ ಹೊಂದಿದ ಅಂದರೆ 2.8 ಮಾಕ್ ವೇಗದ ಕ್ಷಿಪಣಿಯನ್ನು ಹೊಂದಿದ ಮೊದಲ ವಾಯು ಸೇನೆ ಎಂಬ ಖ್ಯಾತಿಗೂ ಭಾರತ ಪಾತ್ರವಾಗಿದೆ.  ರಷ್ಯಾ ಮತ್ತು ಭಾರತ ಜಂಟಿಯಾಗಿ ನಿರ್ಮಿಸಲಾಗಿರುವ ವಿಶ್ವದ ಅತೀ ವೇಗದ ಬ್ರಹ್ಮೋಸ್ ಕ್ಷಿಪಣಿಗೆ, ಗಲ್ಫ್​ ದೇಶಗಳು ದೇಶಗಳಲ್ಲಿ ಭಾರೀ ಬೇಡಿಕೆ ಉಂಟಾಗಿದೆ.
SCROLL FOR NEXT