ದೇಶ

ಚಿಟ್ ಫಂಡ್ ಹಗರಣ: ಕೋಲ್ಕತ್ತಾ ಮಾಜಿ ಪೋಲೀಸ್ ಆಯುಕ್ತರಿಗೆ ಸಿಬಿಐನಿಂದ ಲುಕೌಟ್ ನೋಟೀಸ್

Raghavendra Adiga
ಕೋಲ್ಕತ್ತ: ಕೋಲ್ಕತ್ತಾದ ಮಾಜಿ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ವಿರುದ್ಧ  ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಲುಕೌಟ್ ನೋಟೀಸ್ ಜಾರಿ ಮಾಡಿದೆ. ಶರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ  ವಲಸೆ ಕಛೇರಿ ವಿಭಾಗ  ಈ ಕ್ರಮ ತೆಗೆದುಕೊಂಡಿದೆ.
ಶರದಾ ಚಿಟ್ ಫಂಡ್ ಹಗರಣದಲ್ಲಿ ರಾಜೀವ್ ಕುಮಾರ್ ಅವರ ಹೆಸರೂ ಕೇಳಿಬಂದಿರುವ ಹಿನ್ನೆಲೆ ಅವರು ಮಿರ್ ಪುರ್ ಅಥವಾ ಬಂಗಾಳದ ಇತರೆ ಬಂದರುಗಳಿಂದ ದೇಶವನ್ನು ತೊರೆದು ಹೋಗಲು ಮುಂದಾದರೆ ಅವರನ್ನು ಸಿಬಿಐಗೆ ವಹಿಸಬೇಕೆಂದು ನೋಟೀಸ್ ನಲ್ಲಿ ಹೇಳಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರ್ಯಾಲಿ ವೇಳೆ ನಡೆದಿದ್ದ ಹಿಂಸಾಚಾರದ ನಂತರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಸಿಐಡಿನ ಎಡಿಜೆ ಹುದ್ದೆಯಿಂದ ರಾಜೀವ್ ಕುಮಾರ್ ಅವರನ್ನು ವಜಾ ಮಾಡಿದೆ. ಸದ್ಯ ರಾಜೀವ್ ದೆಹಲಿಯ ಗೃಹ ವ್ಯವಹಾರ ಸಚಿವಾಲಯದಲ್ಲಿ ಅಧಿಕಾರಿಯಾಗಿ ಮುಂದುವರಿದಿದ್ದಾರೆ.
SCROLL FOR NEXT