ದೇಶ

ರೈಲ್ವೆಯಲ್ಲಿ ಟಿಕೆಟ್ ಖರೀದಿಸದೆ ಪ್ರಯಾಣಿಸುವವರ ಸಂಖ್ಯೆ ಶೇ.60ರಷ್ಟು ಅಧಿಕ

Sumana Upadhyaya
ಚೆನ್ನೈ: ಕಳೆದ 5 ವರ್ಷಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುವವರ ಸಂಖ್ಯೆ ಶೇಕಡಾ 60ರಷ್ಟು ಅಧಿಕವಾಗಿದ್ದು ದೇಶಾದ್ಯಂತ ಪ್ರತಿದಿನ ಸರಾಸರಿ 75 ಸಾವಿರ ಪ್ರಯಾಣಿಕರು ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ ಎಂಬ ಅಂಕಿಅಂಶ ಸಿಕ್ಕಿದೆ.
ಟಿಕೆಟ್ ರಹಿತ ಪ್ರಯಾಣ ಮಾಡುವವರನ್ನು ತಡೆಗಟ್ಟಲು ಭಾರತೀಯ ರೈಲ್ವೆ ಇಲಾಖೆ ಪ್ರಯತ್ನಿಸಿರುವುದರಿಂದ 2014ರ ಏಪ್ರಿಲ್ ನಿಂದ 2019ರ ಮಾರ್ಚ್ ವರೆಗೆ ಇಲಾಖೆಯ ಆದಾಯದಲ್ಲಿ 5 ಸಾವಿರದ 944.71 ಕೋಟಿ ರೂಪಾಯಿಗಳಾಗಿದೆ. ಅದೇ ರೀತಿ ಈ ಅವಧಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಕೂಡ ಶೇಕಡಾ 60ರಷ್ಟು ಹೆಚ್ಚಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿಯಿಂದ ತಿಳಿದುಬಂದಿದೆ.
2014-15ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದವರ ಸಂಖ್ಯೆ 1.87 ಕೋಟಿಯಷ್ಟಾಗಿದ್ದು ಕಳೆದ ವರ್ಷ ಅದು ಶೇಕಡಾ 2.76ಕ್ಕೆ ಏರಿಕೆಯಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಗೆ ಹಾಕಿರುವ ದಂಡದ ಮೊತ್ತದಿಂದ ಇಲಾಖೆಗೆ ಬಂದ ಆದಾಯ ಕಳೆದೆರಡು ವರ್ಷಗಳಲ್ಲಿ ಶೇಕಡಾ 100ರಷ್ಟು ಅಧಿಕವಾಗಿದೆ. ಮೋಸ ಮಾಡುವವರ ಸಂಖ್ಯೆ ಕೂಡ ಶೇಕಡಾ 20ರಷ್ಟು ಹೆಚ್ಚಳವಾಗಿದೆ.
SCROLL FOR NEXT