ದೇಶ

ಚೆನ್ನೈ: ಪೊಲೀಸರು ಬೆನ್ನತ್ತಿದ್ದರಿಂದ 1.5 ಕೋಟಿ ಹಣವನ್ನು ರಸ್ತೆಗೆ ಎಸೆದು ಪರಾರಿಯಾದ ದರೋಡೆಕೋರರು

Nagaraja AB

ಚೆನ್ನೈ:  ಅಣ್ಣಾ ಸಲೈನಲ್ಲಿನ ಸ್ಪೆನ್ಸರ್ಸ್ ಪ್ಲಾಜಾ ಮಾಲ್ ಮಾಲೀಕರ ಮನೆಯಿಂದ ಕಳ್ಳತನ ಮಾಡಿದ್ದ ದರೋಡೆಕೋರರನ್ನು ಪೊಲೀಸರು ಬೆನ್ನತ್ತಿದ್ದರಿಂದ  ಸುಮಾರು 1. 56 ಕೋಟಿ ರೂಪಾಯಿಯನ್ನು  ರಸ್ತೆ ಮೇಲೆಯೇ  ಎಸೆದು ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ

ಬೆಳಗ್ಗೆ 2.30 ರ ಸುಮಾರಿನಲ್ಲಿ ಬೈಕಿನಲ್ಲಿ ಬಂದಿದ್ದ ಅಪರಿಚಿತ ದರೋಡೆಕೋರರು  ಆ ಪ್ರದೇಶದಲ್ಲಿ ಓಡಾಡುತ್ತಿದುದ್ದನ್ನು ಪೊಲೀಸರು ನೋಡಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗುವಾಗ ಅದೇ  ಸ್ಥಳದಲ್ಲಿ ನಾಲ್ಕು ಬಾರಿ ದರೋಡೆಕೋರರನ್ನು ಗಮನಿಸಿದ್ದರಿಂದ ಶಂಕೆ ಉಂಟಾಗಿ ಅವರನ್ನು ಬೆನ್ನತ್ತಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಬೈಕ್ ಮೇಲೆ ಇಟ್ಟಿದ್ದ ಮೂರು ಬ್ಯಾಗ್ ಗಳ ಪೈಕಿ ಒಂದು ಬೈಕಿನಿಂದ ಕೆಳಗೆ ಬಿದಿದ್ದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿತರ ಎರಡು ಬ್ಯಾಗ್ ಗಳನ್ನು ರಸ್ತೆಯಲ್ಲಿಯೇ  ಎಸೆದು ದರೋಡೆಕೋರರು ಪರಾರಿಯಾಗಿದ್ದಾರೆ.  ಆ ಬ್ಯಾಗ್ ನಲ್ಲಿ 1 ಕೋಟಿ 56 ಲಕ್ಷ ರೂಪಾಯಿ  ಪತ್ತೆಯಾಗಿದೆ.

ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಉದ್ಯಮಿ ಎಂ. ಬಾಲಸುಬ್ರಮಣ್ಯಂ ಅವರ ಮನೆಯಿಂದ 1.56 ಕೋಟಿ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಸೈದಾಪೆೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬಾಲಸುಬ್ರಮಣ್ಯಂ  ಇತರರ ಪಾಲುದಾರಿಕೆಯಲ್ಲಿ 1987ರಲ್ಲಿ ಸ್ಪೆನ್ಸರ್ಸ್  ಪ್ಲಾಜಾ ಸ್ಥಾಪಿಸಿದ್ದರು. ನಂತರ ಅದರಿಂದ ಅವರು ಹೊರಗಡೆ ಬಂದಿದ್ದರು ಎಂಬುದು ತಿಳಿದುಬಂದಿದೆ.

ಬಾಲಸುಬ್ರಮಣ್ಯಂ  5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದರು. ಅದರಲ್ಲಿ ಉಳಿದದ್ದು ಈ ಹಣವಾಗಿದೆ. ಮನೆ ಕಿಟಕಿ ಮೂಲಕ ಒಳಗಡೆ  ನುಗ್ಗಿ ದರೋಡೆಕೋರರು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT