ಸಾಂದರ್ಭಿಕ ಚಿತ್ರ 
ದೇಶ

ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ಐಎಎಸ್ ಅಧಿಕಾರಿ: ರಾಜ್ಯಪಾಲರ ಮೆಚ್ಚುಗೆ!

ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ತಮ್ಮ ಮಕ್ಕಳಿದೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಅನ್ನೋದು ಎಲ್ಲಾ ಪೋಷಕರ ಬಯಕೆ, ಹೀಗಾಗಿ ಹೆಚ್ಚಿನ ...

ಭೂಪಾಲ್: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ತಮ್ಮ ಮಕ್ಕಳಿದೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಅನ್ನೋದು ಎಲ್ಲಾ ಪೋಷಕರ ಬಯಕೆ, ಹೀಗಾಗಿ ಹೆಚ್ಚಿನ ಹಣ ತೆತ್ತು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ, 
ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಒಬ್ಬರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ್ದಾರೆ. ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರಿಗೆ ಮಾದರಿಯಾಗಿದ್ದಾರೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪಂಕಜ್​ಜೈನ್ ತಮ್ಮ ಮಗಳನ್ನ ಯಾವುದೇ ಖಾಸಗಿ​ಶಾಲೆಯ ಎಲ್​ಕೆಜಿ, ಯುಕೆಜಿಗೆ ಅಡ್ಮಿಷನ್​ಮಾಡದೇ ಸರ್ಕಾರಿ ಅಂಗನವಾಡಿ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಎಲ್ಲ ಪ್ರೈವೇಟ್​ ಪ್ಲೇ ಸ್ಕೂಲ್​ಗಳಿಗಿಂತ ಅಂಗನವಾಡಿ ಚೆನ್ನಾಗಿದೆ.ಸರ್ಕಾರಿ ಅಧಿಕಾರಿಯಾಗಿರುವ ನನ್ನ ತರಹದವರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಕುಳುಹಿಸುವುದರಿಂದ ಅಲ್ಲಿಯ ಕೆಟ್ಟ ಪರಿಸ್ಥಿತಿಗಳು ತಾವಾಗಿಯೇ ಸುಧಾರಣೆ ಕಾಣುತ್ತವೆ. ಒಂದು ವೇಳೆ ಯಾವುದಾದ್ರೂ ಸಮಸ್ಯೆ ಇದ್ದರೆ ಅದು ಬೇಗ ನಮಗೆ ಗೊತ್ತಾಗುತ್ತೆ. ಇದರಿಂದ ಅವುಗಳ ಬಗ್ಗೆ ಬೇಗನೆ ಪರಿಹಾರ ಕಂಡುಕೊಳ್ಳಬಹುದು ಅಂತಾ ಐಎಎಸ್​ ಆಫೀಸರ್ ಪಂಕಜ್​ಜೈನ್​ ಹೇಳುತ್ತಾರೆ.
ಈ ವಿಷಯ ರಾಜ್ಯಪಾಲರಾಗಿರುವ ಆನಂದಿಬೆನ್​ಗೆ ತಿಳಿದು ಪಂಕಜ್​ಜೈನ್​ಗೆ ಪತ್ರವೊಂದನ್ನ ಬರೆದು ಶುಭಾಶಯ ಕೋರಿದ್ದಾರೆ. ಸದ್ಯ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಾರ್ವಜನಿಕ ಅಧಿಕಾರಿ ಸಮಾಜಕ್ಕೆ ಮಾದರಿಯಾಗಿರಬೇಕು. ಇದನ್ನ ನೀವು ತೋರಿಸಿಕೊಟ್ಟಿದ್ದೀರಿ. ಇದರಿಂದ ಸಮಾಜ ನಿಮ್ಮಂತೆಯಾಗಿ, ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ, ಸೇವೆಗಳನ್ನ ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ಸರ್ಕಾರಿ ಯೋಜನೆಗಳು ಸರಿಯಾಗಿ ರಿಲೀಸ್​ ಆಗುತ್ತವೆ. ಹೀಗೆ ನಿಮ್ಮ ನಿಷ್ಠೆ, ಕಾರ್ಯ ಮುಂದುವರೆಸಿರಿ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಹಾರ್ಮೊಜ್ ಮೇಲೆ ಈಗಲೂ ನಮ್ಮದೇ ನಿಯಂತ್ರಣ: ವಾಸ್ತವಕ್ಕೂ ಅಮೆರಿಕ ಹೇಳಿಕೆಗಳಿಗೂ ತಾಳೆಯಾಗುವುದಿಲ್ಲ- ಇರಾನ್

ಮೆಟ್ರೋ ರೈಲಿನಲ್ಲೇ ಮಹಿಳೆಯ ಪುಲ್‌ಅಪ್ಸ್‌ ಕಸರತ್ತು; ಹೊಸ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!