ನವದೆಹಲಿ: ಲೋಕಸಮರದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಆದರೆ ಪಕ್ಷದ ಹಿರಿಯ ಣಾಯಕರು ರಾಹುಲ್ ನಿರ್ಧಾರವನ್ನಿನ್ನೂ ಅನುಮೋದಿಸಿಲ್ಲ. ಆದರೆ ರಾಹುಲ್ ಮಾತ್ರ ತಾವು ಹಿಡಿದ ಪಟ್ಟು ಬಿಡುತ್ತಿಲ್ಲ. ಆದಷ್ಟು ಶೀಘ್ರ ಅಧ್ಯಕ್ಷ ಪದವಿಗೆ ಸೂಕ್ತ ವ್ಯಕ್ತಿಯನ್ನು ಹುಡುಕಿ ಎಂದು ಅವರು ಕೈ ನಾಯಕರಿಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ಈ ವಿಚಾರವನ್ನು ವಿಸ್ಕೃತವಾಗಿ ಚರ್ಚಿಸುವ ಸಲುವಾಗಿ ಮುಂದಿನ ನಾಲ್ಕು ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರುವುದು ಖಚಿತವಾಗಿದೆ.
ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿರುವ ರಾಹುಲ್ ಗಾಂಧಿ ತಾವು ಯಾವ ಕಾರಣಕ್ಕೂ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಲ್ಲದೆ ಪಕ್ಷದ ಪುನರುಜ್ಜೀವನಕ್ಕಾಗಿ ಗಾಂಧಿ-ನೆಹರು ಕುಟುಂಬ ಹೊರತಾದ ನಾಯಕತ್ವವನ್ನು ಹುಡುಕಬೇಕೆಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರ ಪ್ರಸ್ತಾಪದ ನಂತರ ಕಾಂಗ್ರೆಸ್ ನಾಯಕತ್ವದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಪ್ರದರ್ಶನದ ಬಳಿಕ ಹಲವು ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ಘಟಕ ಮುಖ್ಯಸ್ಥರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ಮನಸ್ಸು ಬದಲಿಸಲು ಸಿದ್ದವಿಲ್ಲ ಎಂದಿದ್ದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಳಿ ಸಹ ಅವರು ಇದೇ ಮಾತುಗಳನ್ನಾಡಿದ್ದಾರೆ.ಸೋಲಿನ ಹೊಣೆಗಾರಿಕೆಯನ್ನು ಒಬ್ಬ ವ್ಯಕ್ತಿಯ ತಲೆಗೆ ಕಟ್ಟುವುದು ತಪ್ಪೆಂದು ಅವರು ಭಾವಿಸಿದರೂ ಸಹ ನಾಯಕತ್ವ ಬದಲಾವಣೆ ಬೇಕೆನ್ನುವುದು ಅವರ ಬಲವಾದ ನಿಲುವಾಗಿದೆ.
ಪಕ್ಷದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷಕ್ಕೆ ಅಗತ್ಯವಿರುವ ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ತೀರ್ಮಾನ ಮಾಡುವ ಸಾಧ್ಯತೆ ಇದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ.ಗೆಹ್ಲೋಟ್ ಮಗನಿಗೆ ಟಿಕೆಟ್ ನೀಡಲು ರಾಹುಲ್ ಬಯಸಿರಲಿಲ್ಲ ಎಂದು ಮೂಲಗಳು ಹೇಳಿದೆ.ರಾಹುಲ್ ಇಂತಹಾ ಆಯ್ಕೆಗಳನ್ನು ಬಯಸಿರಲಿಲ್ಲ ಎನ್ನಲಾಗಿದ್ದು ನೂತನವಾಗಿ ಆಯ್ಕೆಯಾಗಿರುವ ಸಂಸದರು ರಾಹುಲ್ ಭೇಟಿಗಾಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಈಗಿನ ಬಿಕ್ಕಟ್ಟನ್ನು ಹೇಗೆ ಪರಿಹರಿಸಬೇಕುಕು ಮತ್ತು ಪಕ್ಷವನ್ನು ಪುನರ್ ಸಂಘಟಿಸುವುದು ಹೇಗೆ ಎಂಬುದರ ಬಗ್ಗೆ ಹಲವಾರು ಸಲಹೆಗಳು ಬಂದಿದೆ.ಅಧ್ಯಕ್ಷೀಯ ವ್ಯವಸ್ಥೆಯ ಬಗ್ಗೆ ಪಕ್ಷದ ವಲಯಗಳಲ್ಲಿ ಒಂದು ಚರ್ಚೆ ಇದಾಗಲೇ ನಡೆದಿದ್ದು ಒಬ್ಬರ ಅಧ್ಯಕ್ಷತೆ ಅಥವಾ ಒಂದು ಅಧ್ಯಕ್ಷೀಯ ಸಮಿತಿಯ ರಚನೆ ಇಲ್ಲವೇ ಒಂದು ಮಂಡಳಿಯ ರಚನೆ ಆಗಬೇಕೆ ಎಂಬ ಬಗ್ಗೆ ತೀರ್ಮಾನಿಸಬೇಕಿದೆ.ಮುಂದಿನ ಸಿಡಬ್ಲ್ಯುಸಿ ಸಭೆಯು ಪಕ್ಷವು ಏಕವ್ಯಕ್ತಿಯ ಅಧ್ಯಕ್ಷ ಸ್ಥಾನ ಹೊಂದಬೇಕೆ ಅಥವಾ ಸಮಿತಿ, ಮಂಡಳಿಯ ರಚನೆ ಅನಿವಾರ್ಯವೇ ಎಂಬುದನ್ನು ತೀರ್ಮಾನಿಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos