ಪಬ್ ಜಿ ಗೇಮ್ ನ ಮತ್ತು, ಜೀವಕ್ಕೆ ತಂದಿತು ಆಪತ್ತು! ಆಡಾಡ್ತಾ ಪ್ರಾಣ ಬಿಟ್ಟ 12ನೇ ತರಗತಿ ವಿದ್ಯಾರ್ಥಿ! 
ದೇಶ

ಪಬ್ ಜಿ ಗೇಮ್ ನ ಮತ್ತು, ಜೀವಕ್ಕೆ ತಂದಿತು ಆಪತ್ತು! ಆಡಾಡ್ತಾ ಪ್ರಾಣ ಬಿಟ್ಟ 12ನೇ ತರಗತಿ ವಿದ್ಯಾರ್ಥಿ!

ಪಬ್ ಜಿ ಗೇಮ್ ನ ಸೆಳೆತಕ್ಕೆ ಜೀವವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಉದಾಹರಣೆಯಾಗಿ ಕಣ್ಮುಂದಿವೆ. ಇಂಥಹದ್ದೇ ಘಟನೆ ಈಗ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ.

ಭೋಪಾಲ್: ಪಬ್ ಜಿ ಗೇಮ್ ನ ಸೆಳೆತಕ್ಕೆ ಜೀವವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಉದಾಹರಣೆಯಾಗಿ ಕಣ್ಮುಂದಿವೆ. ಇಂಥಹದ್ದೇ ಘಟನೆ ಈಗ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ. 
ರಾಜಸ್ಥಾನ ಮೂಲದ ಕುಟುಂಬವೊಂದು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶಕ್ಕೆ ಆಗಮಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಬಂದಿದ್ದ XII ತರಗತಿ ವಿದ್ಯಾರ್ಥಿ ಮದುವೆ ಸಂಭ್ರಮದ ನಡುವೆಯೂ  ಪಬ್ ಜೀ ಗೇಮ್ ಗೆ ನಲ್ಲೇ ಮುಳುಗಿ, ಸೋತಿದ್ದರ ಶಾಕ್ ನಿಂದ ಹೃದಯಸ್ತಂಭನಕ್ಕೀಡಾಗಿ ಮೇ.26 ರಂದು ಮೃತಪಟ್ಟಿದ್ದಾನೆ. 
ಫರ್ಕಾನ್ ಖುರೇಷಿ ಮೃತ ಬಾಲಕನಾಗಿದ್ದು, ಈ ದುರ್ಘಟನೆ ನಡೆಯುವುದಕ್ಕೂ ಮುನ್ನ ಸತತ 6 ಗಂಟೆಗಳ ಕಾಲ ಪಬ್ ಜಿ ಗೇಮ್ ಆಡಿದ್ದ ಎಂದು ಪೋಷಕರು ತಿಳಿಸಿದ್ದಾರೆ.  ಮದುವೆ ಕಾರ್ಯಕ್ರಮದಲ್ಲಿಯೂ ಪಬ್ ಜಿ ಗೇಮ್ ಆಡುತ್ತಿದ್ದದ್ದನ್ನು ನೋಡಿದ ಪೋಷಕರು ಆತನನ್ನು ಬೈದಿದ್ದರು. ಆದರೂ ಜಗ್ಗದೇ ಎಂದಿನಂತೆ ಸತತವಾಗಿ ಪಬ್ ಜೀ ಗೇಮ್ ಆಡುವುದನ್ನು ಮುಂದುವರೆಸಿದ್ದ ಒಂದು ಹಂತದಲ್ಲಿ ಅಯಾನ್ ನೀನು ನನ್ನ ಆಟವನ್ನು ಸೋಲಿಸಿದೆ, ನನ್ನ ಜೀವನವನ್ನೂ ಸೋಲಿಸಿದೆ, ನಿನ್ನೊಂದಿಗೆ ಎಂದಿಗೂ ಆಡುವುದಿಲ್ಲ ಎಂದು ಜೋರಾಗಿ ಕಿರುಚಿದ್ದನ್ನು ಆತನೊಂದಿಗೇ ಇದ್ದ ಸಹೋದರಿಯರು ಗಮನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿಆತ ತಲೆ ನೋವುತ್ತಿದೆ ಎಂದು ಕುಸಿದುಬಿದ್ದಿದ್ದಾನೆ.  
ತಕ್ಷಣವೇ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದ. ಓದಿನಲ್ಲೂ ಮುಂದಿದ್ದ ಫರ್ಕಾನ್ ಖುರೇಷಿ, 6-8 ಯುವಕರ ತಂಡ ಕಟ್ಟಿಕೊಂಡು ಕಳೆದ ಒಂದು ವರೆ ವರ್ಷದಿಂದ ಅತಿಯಾಗಿ ಪಬ್ ಜಿ ಗೇಮ್ ಆಡುತ್ತಿದ್ದ ಎಂದು ಅವರ ತಂದೆ ಹರೂನ್ ರಶಿದ್ ಖುರೇಷಿ ಹೇಳಿದ್ದಾರೆ. ಆಸ್ಪತ್ರೆ ವೈದ್ಯರ ಪ್ರಕಾರ ಸೋಲಿನಿಂದ ಏಕಾ ಏಕಿ  ಉಂಟಾದ ಶಾಕ್ ನಿಂದ ಹೃದಯಸ್ತಂಭನ ಉಂಟಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT