ದೇಶ

ಧೀರ್ಘಕಾಲ ತೈಲ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಧರ್ಮೇಂದ್ರ ಪ್ರಧಾನ್ ಪಾತ್ರ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಮತ್ತೆ ಪೆಟ್ರೋಲಿಯಂ ಖಾತೆ ಪಡೆದಿರುವ ಧರ್ಮೇಂದ್ರ ಪ್ರಧಾನ್ ದೇಶದಲ್ಲಿ ಧೀರ್ಘ ಕಾಲ  ತೈಲ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.

ಈ ಬಾರಿ ದೇಶೀಯ ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಿಸಲು , ರಾಷ್ಟ್ರೀಯ ಅನಿಲ ಗ್ರಿಡ್  ಹಾಗೂ ಸೂಕ್ತ ರೀತಿಯ ಮೂಲಸೌಕರ್ಯದ  ಸಾಮಾನ್ಯ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರಾಮ್ ನಾಯಕ್ ತೈಲ ಸಚಿವರಾಗಿ ಐದು ವರ್ಷ ಪೂರ್ಣಗೊಳಿಸಿದ್ದರು. ಇವರ ನಂತರ ಧರ್ಮೇಂದ್ರ ಪ್ರಧಾನ್  ಮಾತ್ರ ತೈಲ ಸಚಿವರಾಗಿ  ಐದು ವರ್ಷ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ.

ದಿವಂಗತ ಮುರಳಿ ದೇವೋರಾ ಜನವರಿ 2006ರಿಂದ 2011ರವರೆಗೂ ಐದು ವರ್ಷ ತೈಲ ಸಚಿವರಾಗಿ ಪೂರ್ಣಗೊಳಿಸಿದ್ದರು. ಆದರೆ, ಅದು ಯುಪಿಎ ನೇತೃತ್ವದಲ್ಲಿನ ಎರಡು ಸರ್ಕಾರಗಳಲ್ಲಿ  ವಿಭಜಿಸಲ್ಪಟ್ಟಿತ್ತು.

 ಪ್ರಧಾನಿ ನರೇಂದ್ರ ಮೋದಿ ಮತ್ತೆ ನಂಬಿಕೆಯಿಂದ ಧರ್ಮೇಂದ್ರ ಪ್ರಧಾನ್ ಅವರಿಗೆ ಪೆಟ್ರೋಲಿಯಂ ಖಾತೆಯನ್ನೆ ನೀಡದ್ದು, ನಾಯಕ್ ಹಾಗೂ ದೇವೋರಾ ಅವರ ದಾಖಲೆಯನ್ನು ಸರಿಗಟ್ಟುವುದಕ್ಕೆ ಸಿದ್ದರಾಗಿದ್ದಾರೆ.

ನೂತನ ಸರ್ಕಾರದಲ್ಲಿ ಪೆಟ್ರೋಲಿಯಂ ಖಾತೆ ಜೊತೆಗೆ ಹೆಚ್ಚುವರಿಯಾಗಿ ಉಕ್ಕು ಖಾತೆಯನ್ನು ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಲಾಗಿದೆ

SCROLL FOR NEXT